ಮೂರನೇ ಮದುವೆಯಾಗಿ ಇನ್ನೊಬ್ಬನ ಜೊತೆ ಪ್ರೀತಿ: ಮೋಸದಾಟ ಆಡಲು ಹೋಗಿ ಗಂಡನಿಗೆ ಸಿಕ್ಕಿ ಬಿದ್ದಳು!

ಹೊಸದಿಗಂತ ವರದಿ,ಮೈಸೂರು:

ಈಕೆ ಒಂದಲ್ಲ, ಎರಡಲ್ಲ, ಮೂರು ಜನರನ್ನು ಮದುವೆಯಾಗಿದ್ದಾಳೆ. ಇದೀಗ ಮೂರನೇ ಗಂಡನಿಗೆ ಸಿಕ್ಕಿ ಬಿದ್ದು , ಆತನಿಗೆ ಮೂರನೇ ಗಂಡನಿಗೆ ಜೀವ ಬೇದರಿಕೆ ಹಾಕಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಉದಯಗಿರಿಯ ನಿಧಾ ಖಾನ್ ಎಂಬುವವರು ತನ್ನ 3ನೇ ಗಂಡ ರಾಜೀವ್ ನಗರದ ಅಜಾಮ್ ಖಾನ್ ಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮೈಸೂರಿನ ಉದಯಗಿರಿಯ ವಾಸಿಯಾದ ನಿಧಾಖಾನ್, 2019 ರಲ್ಲಿ ಮೈಸೂರಿನ ರಾಜೀವ್ ನಗರದ ಆಜಾಮ್ ಖಾನ್ ಜೊತೆ ಮದುವೆಯಾಗಿದ್ದಾಳೆ. ಆದರೆ ಈಗಾಗಲೇ ಎರಡು ಮದುವೆಯಾಗಿರುವ ಸಿಕ್ರೇಟ್ ಕಾಪಾಡಿದ್ದಳು. ತಿಂಡರ್ ಆಪ್ ನಲ್ಲಿ ಯುವಕರನ್ನು ಪರಿಚಯ ಮಾಡಿಕೊಳ್ಳುವುದು ಪ್ರೇಮದ ಬಲೆಗೆ ಬೀಳಿಸಿಕೊಂಡು ಅವರಿಗೆ ಮೋಸ ಮಾಡುವುದು ಇವಳ ಕಯ್ಯಾಲಿಯಂತೆ. ಮತ್ತೊಬ್ಬನ ಕಣ್ಣಿಗೆ ಮಣ್ಣೆರಚಿ ಅವನನ್ನು ಮದುವೆಯಾಗುವುದು ಇವಳ ಚಾಳಿಯಂತೆ.
ಈಗಾಗಲೇ ಎರಡು ಮದುವೆಯಾಗಿರುವ ನಿಧಾ ಖಾನ್ ಗೆ, ಟೆಂಡರ್ ಅಪ್ ಮೂಲಕ ಅಜಾಮ್ ಖಾನ್ ಪರಿಚಯವಾಗಿತ್ತು. ನವೆಂಬರ್ 2019 ರಲ್ಲಿ ಅಜಾಮ್ ಖಾನ್ ಜೊತೆ ನಿಧಾ ಖಾನ್ ಮೂರನೇ ಮದುವೆಯಾಗಿದ್ದು, ಅಜಾಮ್ ಖಾನ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾನೆ.
ಮದುವೆಯಾದ ನಂತರ ನಿಫಾ ಖಾನ್ ಅಸಲಿ ಆಟ ಆಜಾಮ್ ಖಾನ್ ಒಂದೊAದಾಗಿ ಪ್ರದರ್ಶನವಾಗುತ್ತಾ ಬಂದಿತು. ಬೇರೆ ಪುರುಷರ ಜೊತೆ ಚಾಟಿಂಗ್ ಹಾಗೂ ಮೀಟಿಂಗ್ ಮಾಡುವುದು ತಿಳಿಯಿತು. ಕಡೆಗೆ ಇವಳ ರಂಗಿನಾಟ ಕಣ್ಣಾರೆ ಕಂಡ ಆಜಾಮ್ ಖಾನ್ ಬೇಸತ್ತು. ಆಕೆಯನ್ನು ಸಾಕ್ಷಿ ಸಮೇತ ಹಿಡಿಯಲು ಪ್ರಯತ್ನಿಸುತ್ತಿದ್ದ. ಕಡೆಗೆ ನಿಫಾ ಖಾನ್ ಬೇರೊಬ್ಬನ ಜೊತೆ ಇರುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಳು.
ಬಳಿಕ ನಿಫಾ ಖಾನ್ ಲವ್ವಿ ಡವ್ವಿಯ ಸಾಕ್ಷಾಧಾರಗಳ ಸಮೇತ ಮೈಸೂರಿನ ಉದಯಗಿರಿ ಪೋಲಿಸರಿಗೆ ಪತಿಯೇ ಒಪ್ಪಿಸಿದ್ದಾನೆ. ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಮೂರು ಮದುವೆಯಾಗಿದ್ದಾಳೆ. ಪೋಲಿಸರ ತನಿಖೆಯಿಂದ ಇವಳ ಇನ್ನೇಷ್ಟು ಮೋಸದಾಟ ಬಯಲಾಗುತ್ತೊ ಅಂತ ಕಾದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!