ಚೀನಾದಲ್ಲಿ ವಿಮಾನ ಪತನ: ಬ್ಲ್ಯಾಕ್​​ ಬಾಕ್ಸ್ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಚೀನಾದ ಗುವಾಂಗ್‌ಕ್ಸಿ ಪ್ರಾಂತ್ಯದಲ್ಲಿ ಸೋಮವಾರ ಪತನಗೊಂಡ ಚೀನಾದ ಈಸ್ಟರ್ನ್ ಏರ್‌ಲೈನ್ಸ್​ ವಿಮಾನದ ಬ್ಲ್ಯಾಕ್​​ ಬಾಕ್ಸ್​(ಕಪ್ಪು ಪೆಟ್ಟಿಗೆ) ಮತ್ತು ಕೆಲ ದಾಖಲೆಗಳು ಪತ್ತೆಯಾಗಿವೆ.
ವಾಯಯಾನ ನಿಯಂತ್ರಕ ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿ ನೀಡಿದ್ದು, ಪೈಲಟ್​ಗಳ ವಿವರಗಳನ್ನೂ ಬಿಡುಗಡೆ ಮಾಡಲಾಗಿದೆ. ವಿಮಾನದಲ್ಲಿದ್ದ ಮೂವರೂ ಪೈಲಟ್​ಗಳು ಚಾಲನಾ ಪರವಾನಗಿ ಮತ್ತು ಆರೋಗ್ಯ ಪ್ರಮಾಣಪತ್ರಗಳು ಮತ್ತು ಹೆಚ್ಚಿನ ಅನುಭವ ಹೊಂದಿದ್ದರು ಎಂದು ತಿಳಿದುಬಂದಿದೆ.
ವಿಮಾನ ಪತನ ಮುನ್ನ ಪೈಲಟ್​ಗಳು ಏರ್ ಟ್ರಾಫಿಕ್ ಕಂಟ್ರೋಲರ್‌ ಸಂಪರ್ಕ ಕಳೆದುಕೊಂಡಿದ್ದರು. ಇನ್ನೊಂದು ಬ್ಲ್ಯಾಕ್​ ಬಾಕ್ಸ್​ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ಪತ್ತೆ ಕಾರ್ಯ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕುನ್‌ಮಿಂಗ್‌ನಿಂದ ಗುವಾಂಗ್‌ಝೌಗೆ ಪಯಣಿಸುತ್ತಿದ್ದ 132 ಜನರಿದ್ದ ವಿಮಾನ 3 ಸಾವಿರ ಅಡಿ ಎತ್ತರದಿಂದ 155 ಸೆಕೆಂಡ್​ಗಳ ಅಂತರದಲ್ಲಿ ನೆಲಕ್ಕೆ ಅಪ್ಪಳಿಸಿ ಪತನಗೊಂಡಿದ್ದು, ಈವರೆಗೂ ಯಾವೊಬ್ಬ ಪ್ರಯಾಣಿಕ ಬದುಕುಳಿದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!