September 26, 2026
Saturday, September 26, 2026
spot_img

ಕಡಿಮೆ ಖರ್ಚು, ಸಖತ್ ರುಚಿ: ಸಂಜೆ ಟೈಮ್ ಚಹಾ ಜೊತೆ ಸವಿಯಿರಿ ಮಸ್ತ್ ಶೇಂಗಾ ಚುರುಮುರಿ!

ಸಂಜೆ ಟೀ ಜೊತೆ ಅಂತ ತಿನ್ನೋಕೆ ಶೇಂಗಾ ಚುರುಮುರಿಗಿಂತ ಬೆಸ್ಟ್ ಸ್ನಾಕ್ಸ್ ಇನ್ನೊಂದಿಲ್ಲ. ಕಮ್ಮಿ ಟೈಮಲ್ಲಿ, ಗಡಿಬಿಡಿ ಇಲ್ಲದೆ ಕ್ವಿಕ್ ಆಗಿ ಮಾಡಬಹುದಾದ ಲೋಕಲ್ ಸ್ಟೈಲ್ ಶೇಂಗಾ ಚುರುಮುರಿ ರೆಸಿಪಿ ಒಮ್ಮೆ ನೀವು ಟ್ರೈ ಮಾಡಿ:

ಮಂಡಕ್ಕಿ (ಪುರಿ)

ಹುರಿದ ಶೇಂಗಾ

ಈರುಳ್ಳಿ

ಟೊಮೆಟೊ

ಕ್ಯಾರೇಟ್ ತುರಿ

ಕೊತ್ತಂಬರಿ ಸೊಪ್ಪು

ಖಾರದ ಪುಡಿ

ಖಾರಾ ಬೂಂದಿ

ನಿಂಬೆಹಣ್ಣಿನ ರಸ

ಅಡುಗೆ ಎಣ್ಣೆ

ಉಪ್ಪು

ಒಂದು ಪಾತ್ರೆ ತಗೊಂಡು, ಅದಕ್ಕೆ ಹೆಚ್ಚಿದ ಈರುಳ್ಳಿ, ಟೊಮೆಟೊ, ಕ್ಯಾರೇಟ್ ತುರಿ, ಕೊತ್ತಂಬರಿ ಸೊಪ್ಪು ಹಾಕಿ. ಈಗ ಇದಕ್ಕೆ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಶೇಂಗಾ ಮತ್ತೆ ಒಂದೆರಡು ಚಮಚ ಎಣ್ಣೆ ಹಾಕಿ ಚನ್ನಾಗಿ ಮಿಕ್ಸ್ ಮಾಡಿ.

ಈಗ ಮಂಡಕ್ಕಿ ಮತ್ತೆ ಖಾರಾ ಬೂಂದಿ ಹಾಕಿ, ಕೈಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ ಅರ್ಧ ನಿಂಬೆಹಣ್ಣು ಹಿಂಡಿ, ಇನ್ನೊಮ್ಮೆ ಮಿಕ್ಸ್ ಮಾಡಿದ್ರೆ ಚಟಪಟ ಅಂತ ತಿನ್ನೋಕೆ ಬಿಸಿ ಬಿಸಿ ಶೇಂಗಾ ಚುರುಮುರಿ ರೆಡಿ!

Must Read