IPL 2022 | ಇಂದು ಹೊಸ ತಂಡಗಳ ಪಾದಾರ್ಪಣೆ; ಗುಜರಾತ್‌- ಲಕ್ನೋ ಹಣಾಹಣಿ, ಹೇಗಿದೆ ತಂಡಗಳ ಬಲಾಬಲ?

‌ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಐಪಿಎಲ್‌ ನ ಎರಡು ಹೊಸ ತಂಡಗಳಾದ ಕನ್ನಡಿಗ ಕೆ.ಎಲ್‌.ರಾಹುಲ್‌ ನೇತೃತ್ವದ ಲಕ್ನೋ ಸೂಪರ್‌ ಜೈಂಟ್ಸ್‌ ಹಾಗೂ ಹಾಗೂ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತಂಡಗಳು ಇಂದು ಮುಖಾಮುಖಿಯಾಗಲಿವೆ.
ಆಪ್ತಮಿತ್ರರಾಗಿರುವ ರಾಹುಲ್‌ ಹಾಗೂ ಹಾರ್ದಿಕ್‌ ಇಂದು ಪ್ರತಿಸ್ಪರ್ಧಿಗಳಾಗಿ ಕಣಕ್ಕಿಳಿಯುತ್ತಿದ್ದು, ಮೊದಲ ಗೆಲುವಿನ ಸಿಹಿ ಯಾರ ಪಾಲಾಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.  ಎರಡೂ ತಂಡಗಳಲ್ಲಿ ಬಲಿಷ್ಠ ಆಟಗಾರಿದ್ದು ವಾಖೆಂಡೆ ಕ್ರೀಡಾಂಗಣದಲ್ಲಿ ರನ್‌ ಮಳೆ ನಿರೀಕ್ಷಿಸಬಹುದು. ಕಳೆದ ವರ್ಷ ಮುಂಬೈ ತಂಡದಲ್ಲಿದ್ದ ಹಾರ್ದಿಕ್ ಪಾಂಡ್ಯ ಗುಜರಾತ್‌ ತಂಡದ ಸೇರಿದ್ದಾರೆ. ಕೆಎಲ್ ರಾಹುಲ್ ​ಪಂಜಾಬ್ ತೊರೆದು ಲಕ್ನೋ ನಾಯಕತ್ವ ವಹಿಸಿದ್ದಾರೆ. ಹಾರ್ದಿಕ್‌ ಗೆ ನಾಯಕತ್ವ ಅನುಭವವಿಲ್ಲ. ಕೆಎಲ್‌ ಹಿಂದೆ ನಾಯಕತ್ವ ವಹಿಸಿದ್ದಾಗ ಹೆಚ್ಚಿನ ಯಶಸ್ಸು ದೊರೆತಿಲ್ಲ. ಹಾಗಾಗಿ ಇಬ್ಬರು ಹೊಸ ನಾಯಕರ ನಾಯಕತ್ವ ಪರೀಕ್ಷೆಯಲ್ಲಿ ಯಾರಿಗೆ ಯಶಸ್ಸು ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.  ಇಂದಿನ ಪಂದ್ಯಕ್ಕೆ ಕೆಲ ವಿದೇಶಿ ಆಟಗಾರರ ಗೈರು ಎರಡೂ ತಂಡಗಳನ್ನು ಕಾಡಲಿದೆ.
ಲಖನೌ ತಂಡದ ಪರ ಕೆಎಲ್ ರಾಹುಲ್ ಹಾಗೂ ಕ್ವಿಂಟನ್ ಡಿ ಕಾಕ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಮನೀಶ್ ಪಾಂಡೆ, ದೀಪಕ್ ಹೂಡಾ, ಕ್ರನಾಲ್ ಪಾಂಡ್ಯ, ಅವೇಶ್ ಖಾನ್, ಆಂಡ್ರ್ಯೂ ಟೈ, ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್‌ ತಂಡದಲ್ಲಿ ಕಾಣಿಸಿಕೊಳ್ಳುವುದು ಖಚಿತ.
ಇನ್ನು ಗುಜರಾತ್‌ ತಂಡದಲ್ಲಿ ಶುಭ್ಮನ್ ಗಿಲ್ ಗೆ ಜೊತೆಯಾಗಿ ವಿಕೆಟ್ ಕೀಪರ್ ಆಗಿರುವ ಮ್ಯಾಥ್ಯೂ ವೇಡ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಗಳಿವೆ. ಡೇವಿಡ್ ಮಿಲ್ಲರ್‌, ರ್ಹಾರ್ದಿಕ್ ಪಾಂಡ್ಯ ಫಿನಿಶರ್‌ ಗಳಾಗಿದ್ದಾರೆ.  ರಶೀದ್ ಖಾನ್, ಮೊಹಮ್ಮದ್ ಶಮಿ ಮತ್ತು ಲಾಕಿ ಫರ್ಗುಸನ್ ಬೌಲಿಂಗ್‌ ವಿಭಾಗದ ಜವಾಬ್ದಾರಿ ಹೊರಲಿದ್ದಾರೆ.

ಲಖನೌ ಸೂಪರ್ ಜೈಂಟ್ಸ್ ಸಂಭಾವ್ಯ ಪ್ಲೇಯಿಂಗ್ XI: ಕೆಎಲ್ ರಾಹುಲ್ (ಸಿ), ಕ್ವಿಂಟನ್ ಡಿ ಕಾಕ್, ಇವನ್‌ ಲೂಯಿಸ್‌ , ಮನೀಶ್ ಪಾಂಡೆ, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಕೆ ಗೌತಮ್, ದುಷ್ಮಂತ ಚಮೀರಾ, ರವಿ ಬಿಷ್ಣೋಯ್, ಆಂಡ್ರ್ಯೂ ಟೈ, ಅವೇಶ್ ಖಾನ್.

ಗುಜರಾತ್ ಟೈಟನ್ಸ್ ಸಂಭಾವ್ಯ ಪ್ಲೇಯಿಂಗ್ XI: ಶುಭ್ಮನ್ ಗಿಲ್, ಮ್ಯಾಥ್ಯೂ ವೇಡ್, ವೃದ್ಧಿಮಾನ್‌ ಸಾಹಾ, ಡೇವಿಡ್ ಮಿಲ್ಲರ್, ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯ (ನಾಯಕ), ರಾಹುಲ್ ತೇವಾಟಿಯ, ರಶೀದ್ ಖಾನ್, ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ, ಆರ್.ಸಾಯಿಕಿಶೋರ್.‌

ಪಂದ್ಯ ಆರಂಭ: ರಾತ್ರಿ 7.30, ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್, ಡಿಸ್ನಿ + ಹಾಟ್‌ ಸ್ಟಾರ್

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!