ಹಾಟ್ ಹಾಟ್ ಸಮ್ಮರ್‌ಗೆ ಕೂಲ್ ಕೂಲ್ ಕಲ್ಲಂಗಡಿ ಜ್ಯೂಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್

ಬಿಸಿಲ ಬೇಗೆಯಿಂದ ಪಾರಾಗುವುದು ಹೇಗೆ ಎಂಬ ಚಿಂತೆಯಲ್ಲಿದ್ದರೆ ಕಲ್ಲಂಗಡಿ ಜ್ಯೂಸ್ ಫಟಾಫಟ್ ರೆಡಿ ಮಾಡಿ. ಇದು ದೇಹಕ್ಕೂ ತಂಪು, ಬಾಯಾರಿಕೆಯೂ ಮಾಯ!

ಏನ್ ಬೇಕು?
ಕಲ್ಲಂಗಡಿ ಹಣ್ಣು -೧
ರುಚಿಗೆ ತಕ್ಕಷ್ಟು ಸಕ್ಕರೆ
ಒಂದು ಚಿಟಕಿ ಉಪ್ಪು,
ಎರಡು ಲೋಟ ನೀರು,
ಜೇನುತುಪ್ಪ ಒಂದು ಸ್ಪೂನ್
ಕಾಳುಮೆಣಸು (ಒಳ್ಳೆಮೆಣಸು) ಪುಡಿ
ಏಲಕ್ಕಿ ಪುಡಿ

ಏನ್ ಮಾಡ್ಬೇಕು?
ಕಲ್ಲಂಗಡಿ ಹಣ್ಣಿನ ಸಿಪ್ಪೆ ತೆಗೆದು, ಒಳಭಾಗದಲ್ಲಿರುವ ಕಪ್ಪು ಬೀಜಗಳನ್ನು ತೆಗೆದು, ಒಂದು ಕೆ.ಜಿ ಯಷ್ಟು ಹಣ್ಣನ್ನು ಸಣ್ಣಸಣ್ಣ ಹೋಳುಗಳನ್ನಾಗಿ ಕತ್ತರಿಸಿಕೊಳ್ಳಿ. ಸಕ್ಕರೆ, ಜೇನುತುಪ್ಪ, ನೀರು ಸೇರಿಸಿ ಮಿಕ್ಸಿಯಲ್ಲಿ ಚೆನ್ನಾಗಿ ತಿರುಗಿಸಿ. ಬಳಿಕ ಶುಭ್ರವಸ್ತ್ರದಲ್ಲಿ ಶೋಧಿಸಿ ಪ್ರತ್ಯೇಕ ಪಾತ್ರೆಯಲ್ಲಿಟ್ಟುಕೊಳ್ಳಿ. ಒಂದು ಚಿಟಕಿ ಉಪ್ಪು,ಕಾಳುಮೆಣಸಿನ ಪುಡಿ, ಏಲಕ್ಕಿ ಪುಡಿ ಸೇರಿಸಿಕೊಳ್ಳಿ. ಜ್ಯೂಸ್‌ಗೆ ಐಸ್ ಕ್ಯೂಬ್ ಸೇರಿಸದರೆ ಇನ್ನೂ ಟೇಸ್ಟಿ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!