ದೇಶದ ನೂತನ ಸಿಡಿಎಸ್‌ ಆಗಿ ಲೆಫ್ಟಿನೆಂಟ್‌ ಜನರಲ್‌ ಅನಿಲ್‌ ಚೌಹಾಣ್‌ ನೇಮಕ

ಹೊಸದಿಗಂತ ಡಿಜಿಟಲ್ ಡೆಸ್ಕ್:‌

ದೇಶದ ಮುಂದಿನ ಚೀಫ್‌ ಆಫ್‌ ಡಿಫೆನ್ಸ್‌ ಅಥವಾ ಸಿಡಿಎಸ್‌ ಆಗಿ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಅನಿಲ್‌ ಚೌಹಾಣ್‌ ಅವರು ನೇಮಕ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಅವರು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಭಾರತ ಸರ್ಕಾರದ, ಮಿಲಿಟರಿ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಜನರಲ್ ಬಿಪಿನ್ ರಾವತ್ ಅವರ ನಿಧನದ ಒಂಬತ್ತು ತಿಂಗಳ ನಂತರ, ಸರ್ಕಾರವು ಬುಧವಾರ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾನ್ (ನಿವೃತ್ತ) ಅವರನ್ನು ದೇಶದ ಉನ್ನತ ಮಿಲಿಟರಿ ಅಧಿಕಾರಿಯಾದ ಹೊಸ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಎಂದು ಹೆಸರಿಸಿದೆ.

ಸುಮಾರು 40 ವರ್ಷಗಳ ವೃತ್ತಿಜೀವನದಲ್ಲಿ, ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರು ಹಲವಾರು ಕಮಾಂಡ್, ಸಿಬ್ಬಂದಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಅದಲ್ಲದೆ, ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ಭಾರತದಲ್ಲಿ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಯನ್ನೂ ನಡೆಸುವ ಮೂಲಕ ಈ ಭಾಗದ ಗರಿಷ್ಠ ಅನುಭವವನ್ನು ಹೊಂದಿದ್ದಾರೆ. ಪರಮ ವಿಶಿಷ್ಟ ಸೇವಾ ಮೆಡಲ್‌, ಉತ್ತಮ್‌ ಯುದ್ಧ ಸೇವಾ ಮೆಡಲ್‌, ಅತಿ ವಿಶಿಷ್ಟ ಸೇವಾ ಮೆಡಲ್‌, ಸೇವಾ ಮೆಡಲ್‌, ವಿಶಿಷ್ಟ ಸೇವಾ ಮೆಡಲ್‌ ಗೌರವವನ್ನೂ ಪಡೆದುಕೊಂಡ ವ್ಯಕ್ತಿಯಾಗಿದ್ದಾರೆ.

1961 ಮೇ 18 ರಂದು ಜನಿಸಿದ್ದ ಅನಿಲ್‌ ಚೌಹಾಣ್‌ , 1981ರಲ್ಲಿ ಭಾರತೀಯ ಸೇನೆಯ 11 ಗೂರ್ಖಾ ರೈಫಲ್ಸ್‌ನಲ್ಲಿ ಸೇವೆಗೆ ನಿಯೋಜನೆಯಾಗಿದ್ದರು. ಅವರು ಖಡಕ್ವಾಸ್ಲಾದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ಡೆಹ್ರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯ ಹಳೆಯ ವಿದ್ಯಾರ್ಥಿ. ಮೇಜರ್‌ ಜನರಲ್‌ ಶ್ರೇಣಿಯಲ್ಲಿ, ಅನಿಲ್‌ ನೌಹಾಣ್‌ ನಾರ್ಥರ್ನ್‌ ಕಮಾಂಡ್‌ನಲ್ಲಿ ಪ್ರಮುಖವಾಗಿದ್ದ ಬಾರಾಮುಲಾ ವಲಯದಲ್ಲಿ ಇನ್‌ಫ್ಯಾಂಟ್ರಿ ವಿಭಾಗದ ನೇತೃತ್ವ ವಹಿಸಿದ್ದರು. ನಂತರ ಲೆಫ್ಟಿನೆಂಟ್ ಜನರಲ್ ಆಗಿ, ಅವರು ಈಶಾನ್ಯದಲ್ಲಿ ಕಾರ್ಪ್ಸ್‌ಗೆ ನೇತೃತ್ವ ವಹಿಸಿಕೊಂಡಿದ್ದರು. ಆ ಬಳಿಕ, ಸೆಪ್ಟೆಂಬರ್ 2019 ರಿಂದ ಪೂರ್ವ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಸೇವೆ ಸಲ್ಲಿಸಿದ್ದರು. ಅನಿಲ್‌ ಚೌಹಾಣ್‌, ಮೇ 2021 ರಲ್ಲಿ ಸೇವೆಯಿಂದ ನಿವೃತ್ತರಾಗುವವರೆಗೆ ಅಧಿಕಾರವನ್ನು ಹೊಂದಿದ್ದರು.

ಪ್ರಮುಖ ಕಮಾಂಡ್‌ಗಳ ನಾಯಕರಾದ ಅನುಭವದೊಂದಿಗೆ, ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕನ ಉಸ್ತುವಾರಿ ಸೇರಿದಂತೆ ಪ್ರಮುಖ ಸಿಬ್ಬಂದಿ ನೇಮಕಾತಿಗಳ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದರು. ಇದಕ್ಕೂ ಮೊದಲು, ಅನಿಲ್‌ ಚೌಹಾಣ್‌ ಅಂಗೋಲಾಕ್ಕೆ ವಿಶ್ವಸಂಸ್ಥೆಯ ಮಿಷನ್ ಅಡಿಯಲ್ಲಿ ಸೇವೆ ಸಲ್ಲಿಸಿದ್ದರು.2021ರ ಮೇ 31 ರಂದು ಅಧಿಕಾರಿ (CDS) ಭಾರತೀಯ ಸೇನೆಯಿಂದ ನಿವೃತ್ತರಾದರು. ಸೇನೆಯಿಂದ ನಿವೃತ್ತರಾದ ನಂತರವೂ ಅವರು ರಾಷ್ಟ್ರೀಯ ಭದ್ರತೆ ಮತ್ತು ಕಾರ್ಯತಂತ್ರದ ವಿಷಯಗಳಿಗೆ ತನ್ನ ಸೇವೆ ಸಲ್ಲಿಸುವುದನ್ನುಮುಂದುವರಿಸಿದ್ದರು. ಸೇನೆಯಲ್ಲಿನ ಅವರ ವಿಶಿಷ್ಟ ಮತ್ತು ಶ್ರೇಷ್ಠ ಸೇವೆಗಾಗಿ, ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ) ಅವರಿಗೆ ಪರಮ ವಿಶಿಷ್ಟ ಸೇವಾ ಪದಕ, ಉತ್ತಮ ಯುದ್ಧ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಸೇನಾ ಪದಕ ಮತ್ತು ವಿಶಿಷ್ಟ ಸೇವಾ ಪದಕಗಳನ್ನು ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!