ನಾಟಕೀಯ ಕುಸಿತ ಕಂಡ ಲಕ್ನೋ: ಗೆದ್ದು ಸಂಭ್ರಮಿಸಿದ ಗುಜರಾತ್​!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್​ ಟೈಟನ್ಸ್ ವಿರುದ್ಧ ನಾಟಕೀಯ ಕುಸಿತ ಕಂಡ ಲಕ್ನೋ ಸೂಪರ್​ ಜೈಂಟ್ಸ್​ ತಂಡ 7 ರನ್​ಗಳ ವೀರೋಚಿತ ಸೋಲು ಕಂಡಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ನಡೆಸಿದ ಗುಜರಾತ್​ ಟೈಟನ್ಸ್​ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ ಕೇವಲ 135 ರನ್​ ಗಳಿಸಿತು. ಸುಲಭ ಗುರಿ ಪಡೆದ ಲಕ್ನೋ ಸೂಪರ್​ಜೈಂಟ್ಸ್​ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 128 ರನ್​ ಗಳಿಸಲಷ್ಟೇ ಶಕ್ತವಾಗಿ ವೀರೋಚಿತ ಸೋಲು ಕಂಡಿತು.

ಸಣ್ಣ ಮೊತ್ತವನ್ನು ಬೆನ್ನಟ್ಟಿದ ಲಕ್ನೋ ತಂಡಕ್ಕೆ ನಾಯಕ ಕೆ.ಎಲ್​ ರಾಹುಲ್​ ಅರ್ಧಶತಕ ಬಾರಿಸಿ ಆಸರೆಯಾದರು.

ರಾಹುಲ್​ 38 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಕೈಲ್​ ಮೇಯರ್ಸ್​ ಜತೆಗೆ ಮೊದಲ ವಿಕೆಟ್​ಗೆ 55 ರನ್​ಗಳ ಜತೆಯಾಟ ಕೂಡ ನಡೆಸಿದರು. ಮೇಯರ್ಸ್​ ಒಂದು ಸಿಕ್ಸರ್​ ಮತ್ತು 3 ಬೌಂಡರಿ ಸಿಡಿಸಿ 24 ರನ್​ ಗಳಿಸಿದರು.ಮೇಯರ್ಸ್ ವಿಕೆಟ್​ ಪತನದ ಬಳಿಕ ಆಡಲು ಬಂದ ಕೃಣಾಲ್ ಪಾಂಡ್ಯ(23) ಅವರು ರಾಹುಲ್​ ಜತೆಗೂಡಿ ಬಿರುಸಿನಿಂದಲೇ ಬ್ಯಾಟ್ ಬೀಸಿ ದ್ವಿತೀಯ ವಿಕೆಟ್​ಗೆ 51 ರನ್​ಗಳ ಅಮೂಲ್ಯ ಜತೆಯಾಟ ನಡೆಸಿದರು. ಆದರೆ ನಿಕೋಲಸ್​ ಪೂರನ್​ ಒಂದು ರನ್​ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಸೋಲುವ ಹಂತದಲ್ಲಿದ್ದ ಗುಜರಾತ್​ ಪಂದ್ಯದ ಅಂತಿಮ ಹಂತದಲ್ಲಿ ತಿರುಗಿ ಬಿದ್ದು ಊಹಿಸಲು ಅಸಾಧ್ಯವೆಂಬಂತೆ ಗೆಲುವು ಸಾಧಿಸಿ ಮೆರೆದಾಡಿತು. ರಾಹುಲ್​ ಅವರ 68 ರನ್​ ಇಲ್ಲಿ ವ್ಯರ್ಥವಾಯಿತು. ಮೋಹಿತ್​ ಶರ್ಮ ಅವರ ಅಂತಿಮ ಓವರ್​​ನಲ್ಲಿ 4 ವಿಕೆಟ್​ ಬಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!