Friday, March 24, 2023

Latest Posts

ವಿವಾದದಿಂದ ಠಾಣೆ ಮೆಟ್ಟಿಲೇರಿದ ಜೋಡಿಗಳು: ಪೊಲೀಸರ ರಿಯಾಕ್ಷನ್‌ ಹೇಗಿತ್ತು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಪತಿ-ಪತ್ನಿಯರ ನಡುವಿನ ತೀವ್ರ ಜಗಳಗಳು ವಿಚ್ಛೇದನಕ್ಕೆ ದಾರಿ ಮಾಡಿಕೊಡುತ್ತವೆ. ಘರ್ಷಣೆಯಿಂದಾಗಿ ಅನೇಕ ದಂಪತಿ ಪೊಲೀಸ್ ಠಾಣೆಗಳನ್ನು ಆಶ್ರಯಿಸುತ್ತಾರೆ. ಆದಷ್ಟು ಪೊಲೀಸರು ಅವರಿಗೆ ವಿಶೇಷ ಕೌನ್ಸೆಲಿಂಗ್ ನೀಡಿ ಸಮಾಧಾನಪಡಿಸಲು ಪ್ರಯತ್ನಿಸುತ್ತಾರೆ. ಇತ್ತೀಚೆಗಷ್ಟೇ ಪಂಜಾಬ್ ರಾಜ್ಯದ ಲುಧಿಯಾನ ಪೊಲೀಸರು ವಿನೂತನವಾಗಿ ಯೋಚಿಸಿದ್ದಾರೆ. ಘರ್ಷಣೆಯಿಂದಾಗಿ ಹಲವು ಜೋಡಿಗಳು ವಿಚ್ಛೇದನ ಪಡೆಯಲು ಪೊಲೀಸ್ ಠಾಣೆಗಳ ಮೊರೆ ಹೋಗಿದ್ದರು. ಠಾಣೆಗೆ ಬಂದ ದಂಪತಿಗೆ ವಿಶೇಷ ಕೌನ್ಸೆಲಿಂಗ್ ನಡೆಸಲಾಯಿತು.

ಈ ಪೈಕಿ 20 ಜೋಡಿಗಳು ತಮ್ಮ ಮನಸ್ಸನ್ನು ಬದಲಾಯಿಸಿ ಒಟ್ಟಿಗೆ ಇರಲು ನಿರ್ಧರಿಸಿದ್ದಾರೆ. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ, ಅವರಿಗೆ ಉಚಿತ ಚಲನಚಿತ್ರ ಟಿಕೆಟ್‌ಗಳನ್ನು ನೀಡಿ ಚಿತ್ರಮಂದಿರಕ್ಕೆ ಕಳುಹಿಸಲಾಯಿತು. ಈ ಕುರಿತು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ರೂಪಿಂದರ್ ಕೌರ್ ಭಟ್ಟಿ ಹೇಳಿದ್ದಾರೆ. ಪೊಲೀಸ್ ವಿತ್ ಹಾರ್ಟ್ ಕಾರ್ಯಕ್ರಮದಡಿ ಸಣ್ಣಪುಟ್ಟ ಜಗಳಗಳಿಂದ ಬೇರ್ಪಡಲು ಯೋಚಿಸಿದವರಿಗೆ ಕೌನ್ಸೆಲಿಂಗ್ ನಡೆಸಿ ಒಗ್ಗೂಡಿಸಲಾಗುತ್ತಿದೆ ಎಂದರು.

ತಕರಾರು ತೆಗೆದವರನ್ನು ಠಾಣೆಗೆ ಕರೆಸಿ ಕೌನ್ಸೆಲಿಂಗ್ ಕೊಟ್ಟು 20 ಜೋಡಿಗಳು ಒಂದಾಗಿದ್ದರಿಂದ ಚಿತ್ರಮಂದಿರಕ್ಕೆ ಉಚಿತವಾಗಿ ಟಿಕೆಟ್ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲುಧಿಯಾನ ಪೊಲೀಸರ ಕಲ್ಪನೆಯನ್ನು ಸ್ಥಳೀಯ ಜನರು ಮೆಚ್ಚುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!