ಫುಟ್ಬಾಲ್​ ಫೈನಲ್ ನಲ್ಲಿ ಆಟಗಾರ್ತಿ ಗೆ ಕಿಸ್ ಕೊಟ್ಟ ಲೂಯಿಸ್ ರುಬೆಲೆಸ್ ಅಮಾನತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಹಿಳಾ ವಿಶ್ವಕಪ್ ಫುಟ್ಬಾಲ್​ ಫೈನಲ್ ಪಂದ್ಯದ ವೇಳೆ ಒಂದು ವಿವಾದಿತ ಘಟನೆ ನಡೆದಿದೆ.

ಮಹಿಳಾ ವಿಶ್ವಕಪ್ ಫುಟ್ಬಾಲ್​ ಫೈನಲ್ ಪಂದ್ಯದಲ್ಲಿ ಸ್ಪೇನ್ ಆಟಗಾರ್ತಿ ಜೆನ್ನಿ ಹೆರ್ಮೊಸೋ(Jenni Hermoso) ಅವರಿಗೆ ಸ್ಪೇನ್ ಫುಟ್ಬಾಲ್ ಫೆಡರೇಷನ್ ಅಧ್ಯಕ್ಷ ಲೂಯಿಸ್ ರುಬೆಲೆಸ್(Luis Rubiales) ಚುಂಬಿಸಿದ್ದು, ಇದೀಗ ಈ ಫೆಡರೇಷನ್ ಅಧ್ಯಕ್ಷನ್ನು ಫಿಫಾ(FIFA) ಅಮಾನತುಗೊಳಿಸಿದೆ.

ಲೂಯಿಸ್ ರುಬೆಲೆಸ್ ಅವರು ಪ್ರಶಸ್ತಿ ಪ್ರಧಾನದ ವೇಳೆ ವೇದಿಕೆಯಲ್ಲೇ ತನ್ನ ದೇಶದ ಆಟಗಾರ್ತಿ ಜೆನ್ನಿ ಹೆರ್ಮೊಸೋ(Jenni Hermoso) ಅವರನ್ನು ತಬ್ಬಿಕೊಂಡು ತುಟಿಗೆ ಎಲ್ಲರ ಎದುರಲ್ಲೇ ಚುಂಬಿಸಿದ್ದರು.(kiss controversy)
ರುಬೆಲೆಸ್ ಅವರ ಈ ವರ್ತನೆಗೆ ಎಲ್ಲಡೆ ಭಾರಿ ಟೀಕೆ ವ್ಯಕ್ತವಾಗಿತ್ತು.

ಹೀಗಾಗಿ ರುಬೆಲೆಸ್ ಅವರನ್ನು ಅಮಾನತುಗೊಳಿಸಿ ಆದೇಶಿಸಿದ ಫಿಫಾ, ತನ್ನ ಹೇಳಿಕೆಯಲ್ಲಿ, ಆಟಗಾರ್ತಿಯ ಒಪ್ಪಿಗೆಯಿಲ್ಲದೆ ತುಟಿಗೆ ಚುಂಬಿಸಿರುವ 46 ವರ್ಷದ ಲೂಯಿಸ್‍ರನ್ನು ಕನಿಷ್ಠ 90 ದಿನಗಳವರೆಗೆ ಅಮಾನತು ಮಾಡಲಾಗಿದೆ. ಇದಲ್ಲದೆ ಅವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಫುಟ್ಬಾಲ್ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತಿಲ್ಲವೆಂದು ತಿಳಿಸಲಾಗಿದೆ. ಅಲ್ಲದೆ ಆಟಗಾರ್ತಿ ಜೆನ್ನಿ ಹೆರ್ಮೊಸೋ ಮತ್ತು ಆಕೆಯ ಆಪ್ತರನ್ನು ಯಾವುದೇ ಕಾರಣಕ್ಕೂ ಸಂಪರ್ಕಿಸುವಂತಿಲ್ಲವೆಂದು ಸೂಚನೆ ನೀಡಿದೆ.

ಸ್ಪೇನ್‌ನ ಜೆನ್ನಿಫರ್‌ ಹೆರ್ಮೊಸೊ ಅವರಿಗೆ ವೇದಿಕೆಯಲ್ಲೇ ಚುಂಬಿಸಿದ್ದಕ್ಕೆ ಸ್ಪೇನ್‌ ಫುಟ್ಬಾಲ್ ಸಂಸ್ಥೆ ಅಧ್ಯಕ್ಷ ಲೂಯಿಸ್ ರುಬಿಯಾಲೆಸ್ ಬಹಿರಂಗವಾಗಿ ಕ್ಷಮೆಯಾಚಿಸಿದ್ದರು. ಗೆಲುವಿನ ಸಂತಸದಲ್ಲಿ ಈ ಘಟನೆ ನಡೆದು ಹೋಯಿತು. ನನ್ನ ತಪ್ಪಿಗೆ ನಾನು ಕ್ಷೆಮೆಯಾಚಿಸುತ್ತೇನೆ ಎಂದು ಹೇಳಿದ್ದರು. ಇದಾದ ಬಳಿಕ ಅವರು ತಮ್ಮ ಹುದ್ದೆಗೆ ರಾಜಿನಾಮೆಯನ್ನು ನೀಡಿದ್ದರು.

ಫೈನಲ್ ಪಂದ್ಯದಲ್ಲಿ​ ಸ್ಪೇನ್(Spain beat England)​ ತಂಡ ಇಂಗ್ಲೆಂಡ್​ ತಂಡವನ್ನು 1-0 ಅಂತರದಿಂದ ಮಣಿಸಿ ಚೊಚ್ಚಲ ಬಾರಿ ವಿಶ್ವ ಕಿರೀಟ ಗೆದ್ದಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!