Monday, October 2, 2023

Latest Posts

SHOCKING | ಕೊಡಗಿನಲ್ಲಿ ಹುಲಿ ದಾಳಿಗೆ ಮತ್ತೊಂದು ಜಾನುವಾರು ಬಲಿ

ಹೊಸದಿಗಂತ ವರದಿ, ಮಡಿಕೇರಿ:

ಕೊಡಗಿಗೆ ಅರಣ್ಯ ಸಚಿವರು ಭೇಟಿ ನೀಡಿ ತೆರಳಿರುವ ಬೆನ್ನಲ್ಲೇ ಹುಲಿ ದಾಳಿಗೆ ಮತ್ತೊಂದು ಜಾನುವಾರು ಬಲಿಯಾಗಿದೆ.

ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಹೋಬಳಿಯ ಕೋತೂರು ಗ್ರಾಮದ ಗಿಣಿ ಗಣೇಶ್ ಎಂಬವರಿಗೆ ಸೇರಿದ ಕರು, ಭಾನುವಾರ ಬೆಳಗ್ಗೆ ನಡೆದ ಹುಲಿ ದಾಳಿಯಲ್ಲಿ ಸಾವಿಗೀಡಾಗಿದೆ.

ಸ್ಥಳಕ್ಕೆ ನಾಗರಹೊಳೆ ವಲಯ ಅರಣ್ಯ ಅಧಿಕಾರಿಗಳು ಹಾಗೂ ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಶನಿವಾರ ಕೊಡಗಿಗೆ ಭೇಟಿ ನೀಡಿದ್ದ ಅರಣ್ಯ ಸಚಿವರು ಕಾಡಾನೆಗಳ ಹಾವಳಿ ತಡೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿದ್ದರು. ಆದರೆ ಕಳೆಸ ಎರಡು ವರ್ಷಗಳಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹುಲಿಗಳ ಹಾವಳಿಯೂ ಮಿತಿ ಮೀರಿದ್ದು, ಜಾನುವಾರುಗಳು ಮಾತ್ರವಲ್ಲದೆ ಜನರೂ ಸಾವಿಗೀಡಾಗಿದ್ದಾರೆ. ಆದರೆ ಈ ಬಗ್ಗೆ ಸಚಿವರು ಚಕಾರ ಎತ್ತದಿರುವುದು ಅಚ್ಚರಿ ಮೂಡಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!