ನವೆಂಬರ್‌ 8ರಂದು ಈ ವರ್ಷದ ಕೊನೆಯ ಚಂದ್ರ ಗ್ರಹಣ: ಎಲ್ಲೆಲ್ಲಿ ಗೋಚರ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಾಗಶಃ ಸೂರ್ಯಗ್ರಹಣದ ಹದಿನೈದು ದಿನಗಳ ನಂತರ, ನವೆಂಬರ್ 8 ರಂದು ಭಾರತ ಮತ್ತು ಜಗತ್ತಿನ ಕೆಲವು ಭಾಗಗಳು ಸಂಪೂರ್ಣ ಚಂದ್ರಗ್ರಹಣಕ್ಕೆ ಸಾಕ್ಷಿಯಾಗಲಿವೆ.
ಇದು 2022 ರ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವಾಗಿದೆ. “ನವೆಂಬರ್ 8, 2022 ರಂದು, ಚಂದ್ರನು ಭೂಮಿಯ ನೆರಳಿನಲ್ಲಿ ಹಾದು ಹೋಗಲಿದ್ದಾನೆ. ಈ ಚಂದ್ರ ಗ್ರಹಣವು ಭಾರತದಲ್ಲಿ ಗೋಚರಿಸಲಿದೆ. ಚಂದ್ರ ಗ್ರಹಣದ ಕಾಲವು ಭಾರತೀಯ ಕಾಲಮಾನ ನ. 8 ರ ಮಧ್ಯಾಹ್ನ 1:32 ರಿಂದ ಪ್ರಾರಂಭವಾಗಿ ಸಂಜೆ 7: 27 ರವರೆಗೆ ನಡೆಯಲಿದೆ.ಸಂಜೆ 6 ಗಂಟೆ 18 ನಿಮಷಕ್ಕೆ ಮುಕ್ತಾಯಗೊಳ್ಳಲಿದೆ.

 

ಭಾರತ ಮತ್ತು ನೆರೆಯ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ರಷ್ಯಾದ ಕೆಲವು ಭಾಗಗಳಲ್ಲದೆ, ಏಷ್ಯಾ, ಉತ್ತರ ಮತ್ತು ದಕ್ಷಿಣ ಅಮೆರಿಕಾ, ಆಸ್ಟ್ರೇಲಿಯಾ, ಉತ್ತರ ಅಟ್ಲಾಂಟಿಕ್ ಮಹಾಸಾಗರ, ಪೆಸಿಫಿಕ್ ಸಾಗರದ ಇತರ ಭಾಗಗಳ ನಿವಾಸಿಗಳಿಗೂ ಆಕಾಶದಲ್ಲಿ ಜರುಗುವ ಅಪರೂಪದ ವಿಧ್ಯಮಾನವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ ಎಂದು ಖಗೋಳ ಭೌತಶಾಸ್ತ್ರಜ್ಞ ದೇಬಿ ಪ್ರಸಾದ್ ದುವಾರಿ ಹೇಳಿದ್ದಾರೆ.
ಸಂಪೂರ್ಣ ಚಂದ್ರಗ್ರಹಣ ಎಂದರೇನು?
ಸೂರ್ಯ, ಭೂಮಿ ಮತ್ತು ಚಂದ್ರರು ಒಟ್ಟುಗೂಡಿದಾಗ ಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ. ಈ ವೇಳೆ ಚಂದ್ರನು ಭೂಮಿಯ ನೆರಳಿನಲ್ಲಿ ಹಾದು ಹೋಗುತ್ತಾನೆ. ಸಂಪೂರ್ಣ ಚಂದ್ರಗ್ರಹಣದಲ್ಲಿ, ಚಂದ್ರನ ಸಂಪೂರ್ಣ ನೆರಳಿನ ಗಾಢವಾದ ಭಾಗ ಭೂಮಿಯ ಮೇಲೆ ಬೀಳುತ್ತಿದೆ. ಕೆಲವೊಮ್ಮೆ ಚಂದ್ರನು ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಈ ವಿದ್ಯಮಾನವನ್ನು ʼಬ್ಲಡ್ ಮೂನ್‌ʼ ಎಂದು ಕರೆಯಲಾಗುತ್ತದೆ.

ಭಾರತದಲ್ಲಿ ಪೂರ್ಣ ಚಂದ್ರಗ್ರಹಣದ ಹಂತಗಳ ಸಂಪೂರ್ಣ ವಿವರ:
ಭಾಗಶಃ ಚಂದ್ರಗ್ರಹಣ ಆರಂಭ – ಮಧ್ಯಾಹ್ನ 2.39
ಪೂರ್ಣ ಚಂದ್ರಗ್ರಹಣ ಆರಂಭ – ಮಧ್ಯಾಹ್ನ 3.46.
ಗರಿಷ್ಠ ಪೂರ್ಣ ಚಂದ್ರಗ್ರಹಣ – 4:29 pm
ಚಂದ್ರಗ್ರಹಣ ಕೊನೆಗೊಳ್ಳುವ ಸಮಯ – ಸಂಜೆ 5:11
ಭಾರತದಲ್ಲಿ 2022ರ ಕೊನೆಯ ಚಂದ್ರ ಗ್ರಹಣವು ಭಾರತದ ಕೋಲ್ಕತ್ತಾ, ಪಾಟ್ನಾ, ರಾಂಚಿ ಮತ್ತು ಗೌಹಾಟಿ ಮುಂತಾದ ಸ್ಥಳಗಳಲ್ಲಿ ಗೋಚರಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!