ಹೊಸದಿಗಂತ ವರದಿ, ಹುಬ್ಬಳ್ಳಿ:
ಮತದಾರರಿಗೆ ಆಮಿಷವೊಡ್ಡವ ಉದ್ದೇಶದಿಂದ ಯಾವುದೇ ದಾಖಲೆಗಳಿಲ್ಲದೆ ಕಟ್ಟದ ಸಾಮಗ್ರಿಗಳ ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಸಿ, ವಾಹನದಲ್ಲಿದ್ದ ೧.೩೦ ಲಕ್ಷ ರೂ. ಮೌಲ್ಯದ ಸಾಮಾಗ್ರಿಗಳನ್ನು ನಗರದ ಹೊರವಯದ ಕುಸುಗಲ್ ರಸ್ತೆ ಚೆಕ್ ಪೋಸ್ಟ್ ನಲ್ಲಿ ವಶಪಡಿಸಿಕೊಳ್ಳಲಾಗಿದೆ. ಬಾಗಲಕೋಟ ವಿದ್ಯಾಗಿರಿಯ ನಿವಾಸಿ ವಿನಾಯಕ ಮಹೇಂದ್ರಕರ, ಈರಣ್ಣ ಶೀಲವಂತರ ಎಂಬುವರು ಬಂತರು. ಬಾಗಲಕೋಟೆಯಿಂದ ಹುಬ್ಬಳ್ಳಿಗೆ ಕಟ್ಟಡ ಸಾಮಾಗ್ರಿಗಳ ಸಾಗಿಸುತ್ತಿದ್ದರು. ಚೆಕ್ ಪೋಸ್ಟ್‌ನಲ್ಲಿದ್ದ ಪೊಲೀಸರು ಪರಿಶೀಲನೆ ವೇಳೆ ಸಾಮಗ್ರಿ ಸಾಗಿಸುತ್ತಿರುವುದು ತಿಳಿದು ಬಂದಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘಣೆಯಾಗಿದ್ದರಿಂದ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
೨.೩೧ ಲಕ್ಷ ರೂ. ವಂಚನೆ: ಬ್ಯಾಂಕ್‌ವೊಂದರ ಕ್ರೇಡಿಟ್ ಕಾರ್ಡ್ ಸ್ಥಗಿತ ಮಾಡಿಸುವುದಾಗಿ ನಂಬಿಸಿದ ವ್ಯಕ್ತಿ ಇಲ್ಲಿಯ ಗಂಗಾಧರ ನಗರದ ಪರಶುರಾಮ ಗೋಕಾಕ ಎಂಬುವರಿಗೆ ೨,೩೧,೭೭೯ ರೂ. ವರ್ಗಾಯಿಸಿಕೊಂಡು ವಂಚಿಸಿದ ಪ್ರಕರಣ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಪರಶುರಾಮ ಅವರು ಕ್ರೇಡಿಟ್ ಕಾರ್ಡ್ ಸ್ಥಗಿತ ಮಾಡಲು ಬ್ಯಾಂಕ್ ಭೇಟಿ ನೀಡಿ ಅರ್ಜಿಸಲ್ಲಿಸಿ ಬಂದಿದ್ದರು. ಮರು ದಿನ ಅಪರಿಚಿತ ವ್ಯಕ್ತಿ ಬ್ಯಾಂಕ್ ಗ್ರಾಹಕ ಕೇಂದ್ರದ ಸಿಬ್ಬಂದಿ ಎಂದು ಇವರಿಗೆ ಕರೆ ಮಾಡಿದ್ದಾನೆ. ಬಳಿಕ ಇವರ ಕ್ರೆಡಿಟ್ ಕಾರ್ಡ್ ಹಾಗೂ ಓಟಿಪಿ ನಂಬರ್ ಪಡೆದು ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ.
ಬಸ್‌ನಲ್ಲಿ ಬ್ಯಾಗ್ ಕಳ್ಳತನ: ಇಲ್ಲಿಯ ಚಿಟಗುಪ್ಪಿ ಪಾರ್ಕ್ ನಿವಾಸಿ ಶೋಭಾ ದಾನಿ ಎಂಬುವರು ಬಸ್‌ನಲ್ಲಿ ಪ್ರಯಾಣ ಮಾಡುವ ವೇಳೆ ಯಾರೋ ಕಳ್ಳರು ಅವರ ವ್ಯಾನಿಟಿ ಬ್ಯಾಂಗ್‌ನಲ್ಲಿದ್ದ ೧.೮೦ ಲಕ್ಷ ರೂ. ಮೌಲ್ಯದ ಆಭರಣಗಳ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಮುಳಗುಂದ ನಾಕಾದಿಂದ ಹುಬ್ಬಳ್ಳಿಗೆ ಬಸ್‌ನಲ್ಲಿ ಬರುವಾಗ ಕಳ್ಳರು ಅವರ ಬ್ಯಾಗ್‌ನಲ್ಲಿದ್ದ ೩೫ ಗ್ರಾಂ ಬಂಗಾರದ ಬಳೆಗಳ ಕಳ್ಳತನ ಮಾಡಿದ್ದಾರೆ. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.