Wednesday, June 7, 2023

Latest Posts

ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಂಡಿತು ಎಲಾನ್ ಮಸ್ಕ್ ಸ್ಪೇಸ್ ಸ್ಟಾರ್​ಶಿಪ್ ರಾಕೆಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಎಲಾನ್​ ಮಸ್ಕ್ (Elon Musk) ಒಡೆತನದ ಸ್ಪೇಸ್ ಎಕ್ಸ್ ನಿರ್ಮಿಸಿರುವ ಜಗತ್ತಿನ ಅತಿದೊಡ್ಡ ರಾಕೆಟ್ ಸ್ಟಾರ್​ಶಿಪ್‌ (Starship Rocket) ಪ್ರಾಯೋಗಿಕ ಉಡಾವಣೆಯಾದ ಕೆಲವೇ ಕ್ಷಣದಲ್ಲಿ ಸ್ಫೋಟಗೊಂಡಿದೆ.

ಟೆಕ್ಸಾಸ್‌ನ ಬೋಕಾ ಚಿಕಾದಲ್ಲಿರುವ ಸ್ಟಾರ್‌ಬೆಸ್‌ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ರಾಕೆಟ್​ ಅನ್ನು ಪ್ರಾಯೋಗಿಕವಾಗಿ ಸ್ಥಳೀಯ ಕಾಲಮಾನ ಗುರುವಾರ ಬೆಳಿಗ್ಗೆ 8.33ಕ್ಕೆ ಉಡಾವಣೆ ಮಾಡಲಾಯಿತು. ನಭದತ್ತ ಚಿಮ್ಮಿದ ರಾಕೆಟ್ ಟೇಕಾಫ್ ಆದ ಸುಮಾರು ನಾಲ್ಕು ನಿಮಿಷಗಳ ನಂತರ ಸ್ಫೋಟಗೊಳ್ಳುವ ಮೊದಲು ಆಗಸದಲ್ಲಿ ಅಲುಗಾಡಲು ಮತ್ತು ತಿರುಗಲು ಪ್ರಾರಂಭಿಸಿ ಸ್ಫೋಟಗೊಂಡಿತು.

ರಾಕೆಟ್ ವ್ಯವಸ್ಥೆಯ ಎರಡು ವಿಭಾಗಗಳಾದ ಬೂಸ್ಟರ್ ಮತ್ತು ಕ್ರೂಸ್ ನೌಕೆ ಉಡ್ಡಯನದ ನಂತರ ಸರಿಯಾಗಿ ಬೇರ್ಪಡಲು ಸಾಧ್ಯವಾಗದಿರುವುದು ಸ್ಫೋಟಕ್ಕೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!