ಮಾಧವನ್ ಮನೆ ಕಳೆದುಕೊಂಡ್ರಾ? ಸಾಮಾಜಿಕ ಮಾಧ್ಯಮದ ಗಾಸಿಪ್ಪಿಗೆ ನಟ ಉತ್ತರಿಸಿದ್ದು ಹೇಗೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಅವರ ಜೀವನ ಕಥೆಯನ್ನು ಆಧರಿಸಿ ʻರಾಕೆಟ್ರಿ: ದಿ ನಂಬಿ ಎಫೆಕ್ಟ್ʼ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಲ್ಲದೆ ಆ ಸಿನಿಮಾವನ್ನು ಮಾಧವನ್‌ ನಿರ್ದೇಶಿಸಿದ್ದಾರೆ ಕೂಡ. ಇದೀಗ ಈ ಸಿನಿಮಾ ಮಾಡಲು ಮಾಧವನ್‌ ತಮ್ಮ ಮನೆ ಮಾರಿಕೊಂಡಿದ್ದಾರೆ ಎಂದು ಹಬ್ಬಿದ್ದ ಊಹಾಪೋಹಗಳಿಗೆ ನಟ ತೆರೆ ಎಳೆದಿದ್ದಾರೆ.

ರಾಕೆಟ್ರಿ ಚಿತ್ರದ ಬಜೆಟ್‌ಗೆ ಹಣ ಸಂಗ್ರಹಿಸುವ ಸಲುವಾಗಿ ಮಾಧವನ್ ತಮ್ಮ ಮನೆಯನ್ನು ಮಾರಾಟ ಮಾಡಿದ್ದಾರೆ ಎಂಬ ಸುದ್ದಿಯೊಂದು ವೈರಲ್ ಆಗಿತ್ತು.  ವಾಸ್ತವವಾಗಿ ಮಾಧವನ್ ಮೊದಲು ರಾಕೆಟ್ರಿ ನಿರ್ದೇಶಕರಲ್ಲ, ಬೇರೊಬ್ಬ ಡೈರೆಕ್ಟರ್ ಈ ಸಿನಿಮಾವನ್ನು ನಿರ್ದೇಶಿಸಬೇಕಿತ್ತು. ಅನೇಕ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದರಿಂದ ಖ್ಯಾತ ನಿರ್ದೇಶಕರೊಬ್ಬರು ರಾಕೆಟ್ರಿ ಸಿನಿಮಾದಿಂದ ದೂರ ಉಳಿದರು. ಬೇರೆ ದಾರಿಯಿಲ್ಲದೆ ಮಾಧವನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದೀಗ ವೈರಲ್‌ ಆಗುತ್ತಿರುವ ಈ ಸುದ್ದಿ ಕುರಿತು ಮಾಧವನ್‌ ಟ್ವೀಟ್‌ ಮೂಲಕ ಸ್ಪಷ್ಟತೆ ನೀಡಿದ್ದಾರೆ.

ʻದಯವಿಟ್ಟು ನಾನೇನೋ ದೊಡ್ಡ ತ್ಯಾಗ ಮಾಡಿದ್ದೀನಿ ಅಂತ ನನ್ನನ್ನು ಆಕಾಶಕ್ಕೆ ಏರಿಸಬೇಡಿ. ಏಕೆಂದರೆ ನಾನು ನನ್ನ ಮನೆಯಲ್ಲ, ಏನನ್ನೂ ಕಳೆದುಕೊಂಡಿಲ್ಲ. ದೇವರ ದಯೆಯಿಂದ ರಾಕೆಟ್ರಿ ಸಿನಿಮಾದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರೂ ಈ ವರ್ಷ ಹೆಚ್ಚಿನ ಆದಾಯ ತೆರಿಗೆ ಪಾವತಿಸಲಿದ್ದಾರೆ. ಅಂತಹ ದೊಡ್ಡ ಮತ್ತು ಹೆಮ್ಮೆ ಪಡುವ ಲಾಭ ಬಂದಿದೆ. ನಾನು ಇನ್ನೂ ನನ್ನ ಮನೆಯನ್ನು ಪ್ರೀತಿಸುತ್ತೇನೆ, ಅದರಲ್ಲಿಯೇ ವಾಸಿಸುತ್ತಿದ್ದೇನೆ!’ ಎಂದು ಸ್ಪಷ್ಟಪಡಿಸಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!