ಸಜ್ಜನ ಸಮುದಾಯಕ್ಕೆ ಮೋಕ್ಷದ ಮಾರ್ಗ ತೋರಿದ ಮಧ್ವಾಚಾರ್ಯರು: ಶ್ರೀ ಸತ್ಯಾತ್ಮತೀಥ೯ರು

ಹೊಸದಿಗಂತ ವರದಿ,ಕಲಬುರಗಿ:

ಸಜ್ಜನ ಸಮುದಾಯಕ್ಕೆ ಮದ್ವಾಚಾರ್ಯರು ಮೋಕ್ಷದ ಮಾರ್ಗ ತೋರಿದ್ದಾರೆ ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥರು ಹೇಳಿದರು.

ಮಳಖೇಡ ಉತ್ತರಾದಿ ಮಠದ ಶ್ರೀ ಜಯತೀರ್ಥರ ಮೂಲ ವೃಂದಾವನ ಸನ್ನಿಧಾನದಲ್ಲಿ ನಡೆಯುತ್ತಿರುವ ಸುಧಾ ಮಂಗಲ ಕಾರ್ಯಕ್ರಮದ ಎರಡನೆ ದಿನದ ಕಾಯ೯ಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ದೇವರು ಮಾಡಿದ ಉಪಕಾರ ಸ್ಮರಣೆ ಮಾಡಿಸಿದವರು ಶ್ರೀಮದಾನಂದತೀರ್ಥರು.
ದೇವರು ಎಲ್ಲೆಡೆ ಇದ್ದಾನೆ ಎಂದು ನಂಬಿದ‌ವರು ಆಸ್ತಿಕರು. ಆಸ್ತಿಕರು ತಿಳಿದಿದ್ದು ಸತ್ಯ ಎಂದು ಹೇಳಿದ ಮಧ್ವಾಚಾರ್ಯರು ಭಗವಂತನ ಅಸ್ತಿತ್ವದ ಬಗ್ಗೆ ತಿಳಿಸಿಕೊಟ್ಟಿದ್ದಾರೆ.

ಪರಮಾಣುವಿನಲ್ಲೂ ದೇವರಿದ್ದಾನೆ ಎಂದು ತಿಳಿದು ಸ್ಮರಣೆ ಮಾಡಬೇಕು. ಅನಂತರೂಪದಿಂದ‌ ಭಗವಂತ‌ ನಿದ್ದು‌ರಕ್ಷಿಸುತ್ತಾನೆ ಎಂಬುದು ಅಣ್ಣದಾಗುತ್ತದೆ. ಕಣಕಣದಲ್ಲಿ ಅನಂತ ರೂಪದಲ್ಲಿ ದೇವರಿದ್ದಾನೆ ಎಂದು ಮದ್ವಾಚಾರ್ಯರು ತಿಳಿಸಿಕೊಟ್ಟಿದ್ದಾರೆ.

ಅಣುಗಿಂತಲೂ ಅಣುವಾಗಿದ್ದಾನೆ ಭಗವಂತ ಎಂದು‌ ಶೃತಿ ಹೇಳಿದೆ. ಅಣುವಿನಲ್ಲೂ‌ಅನಂತ ರೂಪದಿಂದ‌ ದೇವರಿದ್ದಾನೆ ಎಂಬುದನ್ನು‌ ಮದ್ವಾಚಾರ್ಯರು ತಿಳಿಸಿದ್ದಾರೆ.ನಾವುನೊ್ರಸಾದ ಸೇವಿಸುವಾಗ ಒಂದೊಂದು ಅಗಳಿನಲ್ಲಿ‌ಭಗವಂತನಿದ್ದಾನೆ ಎಂದು‌ಅನುಸಂಧಾನ‌ ಮಾಡಬೇಕು ಎಂಬುದನ್ನು ತಿಳಿಸಿಕೊಟ್ಟವರು ಶ್ರೀ ಜಯತೀರ್ಥರು ಎಂದು ಹೇಳಿದ್ದಾರೆ.

ಸುಧಾದ ಒಂದೊಂದು‌ ಪದಗಳಲ್ಲಿ ಸಫಲತೆ ಅಡುಗಿದೆ ಎಂದರು. ನಾಲ್ಕು ‌ಅದ್ಯಾಯದ‌ ಸುಧಾ ಮಂಗಲೋತ್ಸವಕ್ಕೆ ನಾಲ್ವರು ಯತಿಗಳು ಪಾಲ್ಗೊಂಡಿದ್ದಾರೆ.

ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥರು, ಕೂಡಲಿ ಆರ್ಯ ಅಕ್ಷೋಭ್ಯ ಮಠದ ಶ್ರೀ. ರಘುವಿಜಯತೀರ್ಥರು, ಸುಬ್ರಮಣ್ಯ ಮಠದ ಶ್ರೀ ವಿದ್ಯಾಪ್ರಾನ್ನತೀರ್ಥರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!