ಮಧ್ಯಪ್ರದೇಶ ಚುನಾವಣೆ: ಬಿಜೆಪಿಯಿಂದ 5ನೇ ಪಟ್ಟಿ ರಿಲೀಸ್, ಹಾಲಿ ಶಾಸಕರಿಗಿಲ್ಲ ಟಿಕೆಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶ ಚುನಾವಣೆಗೆ 92 ಅಭ್ಯರ್ಥಿಗಳ 5ನೇ ಪಟ್ಟಿಯನ್ನು ಬಿಜೆಪಿ ಶನಿವಾರ ಬಿಡುಗಡೆ ಮಾಡಿದೆ.

ಆ ಮೂಲಕ 230 ಕ್ಷೇತ್ರಗಳ ಪೈಕಿ 228 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಗುಣ ಹಾಗೂ ವಿಧಿಶ ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳ ಘೋಷಣೆ ಬಾಕಿ ಇದೆ.

ರಾಜ್ಯ ಬಿಜೆ‍ಪಿ ಘಟಕದ ಅಧ್ಯಕ್ಷ ಕೈಲಾಸ ವಿಜಯವರ್ಗೀಯ ಅವರ ಪುತ್ರ, ಮೂರು ಬಾರಿ ಶಾಸಕ ಆಕಾಶ್‌ ವಿಜಯವರ್ಗೀಯ ಅವರಿಗೆ ಸೇರಿ ಹಲವು ಮಂದಿ ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸಲಾಗಿದೆ.

ಆಕಾಶ್‌ ಅವರ ಬದಲಿಗೆ ಇಂದೋರ್-3ನೇ ಕ್ಷೇತ್ರದಿಂದ ರಾಕೇಶ್‌ ಗೋಲು ಶುಕ್ಲಾ ಅವರಿಗೆ ಟಿಕೆಟ್‌ ನೀಡಲಾಗಿದೆ.
230 ಕ್ಷೇತ್ರಗಳಿಗೆ ನವೆಂಬರ್‌ 17ರಂದು ಮತದಾನ ನಡೆಯಲಿದೆ. ಡಿಸೆಂಬರ್‌ 3ಕ್ಕೆ ಮತ ಎಣಿಕೆ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!