Sunday, December 3, 2023

Latest Posts

ಉದ್ಧಟತನ ತೋರಿದ ಪಾಕ್ ನಟಿ: ಭಾರತ ಇಸ್ಲಾಮಿಕ್ ದೇಶವಾದರೆ, ಮೋದಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿದರೆ ಬೆಂಬಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ವಿಶ್ವಕಪ್ ಪಂದ್ಯಕ್ಕೂ ಮುನ್ನ ಟ್ವೀಟ್ ಮಾಡಿ ಟ್ರೋಲ್ ಆಗಿದ್ದ ಪಾಕ್ ನಟಿ ಸೆಹರ್ ಶಿನ್ವಾರಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.

ಮೆನ್ ಇನ್ ಗ್ರೀನ್(ಪಾಕಿಸ್ತಾನ ತಂಡ) ಶುಕ್ರವಾರ ಆಡಿದರೆ ಸೋಲೆ ಇಲ್ಲ ಎಂದು ಟ್ವೀಟ್ ಮಾಡಿದ್ದರು. ಆದರೆ ಶುಕ್ರವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ, ಆಸ್ಟ್ರೇಲಿಯಾ ವಿರುದ್ದ ಸೋಲು ಕಂಡಿತ್ತು.

ಇದೀಗ ಭಾರತ ರಿಪಬ್ಲಿಕ್ ಆಫ್ ಇಸ್ಲಾಮಿಕ್ ದೇಶವಾಗಬೇಕು ಅನ್ನೋಇಂಗಿತವನ್ನು ಸೆಹರ್ ಶಿನ್ವಾರಿ ವ್ಯಕ್ತಪಡಿಸಿದ್ದಾರೆ. ಭಾರತ ರಿಪಬ್ಲಿಕ್ ಆಫ್ ಇಸ್ಲಾಮಿಕ್ ದೇಶವಾದರೆ ನಾನು ಟೀಂ ಇಂಡಿಯಾವನ್ನು ಬೆಂಬಲಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಶಿನ್ವಾರಿ, ನರೇಂದ್ರ ಮೋದಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿದು ರಾಹುಲ್ ಗಾಂಧಿ ಪ್ರಧಾನಿಯಾದರೆ ನಾನು ಭಾರತ ಕ್ರಿಕೆಟ್ ತಂಡಕ್ಕೆ ಬೆಂಬಲ ನೀಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

https://twitter.com/SeharShinwari/status/1715690431663522182
ಈ ಮೂಲಕ ಮುಸ್ಲಿಮರು ಭಾರತವನ್ನು ಪ್ರಧಾನಿ ಮೋದಿಯಿಂದ ಮುಕ್ತಮಾಡಬೇಕು. ಪ್ಯಾಲೆಸ್ತಿನಿಯರು ಇಸ್ರೇಲ್‌ನಿಂದ ಪ್ಯಾಲೆಸ್ತಿನ್ ಮುಕ್ತ ಮಾಡಬೇಕು ಎಂದು ಮತ್ತೊಂದು ಟ್ವೀಟ್ ಮಾಡಿ ದ್ವೇಷ ಬಿತ್ತು ಕೆಲಸ ಮಾಡುತ್ತಿದ್ದಾರೆ.
ಪಾಕ್ ನಟಿ ಇದೀಗ ಭಾರತೀಯರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!