ಈ ಸಮೋಸಾ ಅಂಗಡಿ ಹೆಸರು ‘ನಂಬಿಕೆ ದ್ರೋಹಿ’: ಹೆಸರಿನ ಹಿಂದಿನ ಕಥೆ ಕೇಳಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗ್ರಾಹಕರನ್ನು ಸೆಳೆಯಲು ಟೀ ಅಂಗಡಿಗಳಲ್ಲದೆ ಹೋಟೆಲ್, ರೆಸ್ಟೋರೆಂಟ್ ಗಳಿಗೆ ವಿಚಿತ್ರ ಹೆಸರುಗಳನ್ನು ಇಡಲಾಗುತ್ತದೆ. ಅದರಂತೆ ಮಧ್ಯಪ್ರದೇಶದಲ್ಲಿ ವಿನೀತ್ ತಿವಾರಿ ಎಂಬ ಯುವಕ, ಸಮೋಸಾ ಅಂಗಡಿಯ ಹೆಸರು ಕಣ್ಣು ಹುಬ್ಬೇರಿಸುವಂತಿದೆ. ‘ಜೀವನದಲ್ಲಿ ಸಾಕಷ್ಟು ಕಷ್ಟ ಅನುಭವಿಸಿದವ ಎಂಬಂತೆ ತೋರುತ್ತದೆ. ಸಮೋಸಾ ಅಂಗಡಿಗೆ ಇಟ್ಟಿರುವ ಹೆಸರು ನೋಡಿದರೆ ಯಾರೋ ಅಕ್ಷಮ್ಯ ‘ದ್ರೋಹ’ ಎಸಗಿದ್ದಾರೆ ಅನ್ನಿಸುತ್ತದೆ.

ಯುವಕನಿಗೆ ದ್ರೋಹ ಮಾಡಿದ್ದು ‘ಪ್ರೀತಿ’. ನೀವು ಸರಿಯಾಗಿ ಊಹಿಸಿದ್ದೀರಿ. ವಿನೀತ್ ತಿವಾರಿ ಒಬ್ಬ ಹುಡುಗಿಯನ್ನು ಗಾಢವಾಗಿ ಪ್ರೀತಿಸುತ್ತಿದ್ದ. ಪ್ರೀತಿಯಲ್ಲಿ ವಿಫಲವಾಗಿದ್ದಕ್ಕೆ ಭಗ್ರಪ್ರೇಮಿಕರಂತೆ ನಡುಗದೆ, ದೇವದಾಸ್ ನಂತೆ ಜೀವನ ಹಾಳು ಮಾಡಿಕೊಳ್ಳದೆ ರೇವಾ ಪಟ್ಟಣದ ಆದಿತ್ಯ ಹೋಟೆಲ್ ಬಳಿ ಸಮೋಸಾ ಅಂಗಡಿ ಇಟ್ಟಿದ್ದರು. ಆ ಅಂಗಡಿಯ ಹೆಸರು ‘ಬೇವಫಾʼ ಎಂದು ಹೆಸರಿಸಲಾಗಿದೆ ‘ಬೇವಾಫ’ ಎಂದರೆ ವಿಶ್ವಾಸದ್ರೋಹಿ, ನಂಬಿಕೆದ್ರೋಹಿ ಎಂದರ್ಥ. ವಿನೀತ್ ತಿವಾರಿ ಅಂಗಡಿಯಲ್ಲಿ ಸಮೋಸ 15 ರೂ. ಆದರೆ ವಿನೀತ್ ತಿವಾರಿ ತಮ್ಮ ಅಂಗಡಿಯಲ್ಲಿ ಪ್ರೇಮಿಗಳಿಗೆ ರಿಯಾಯಿತಿಯನ್ನು ನೀಡುತ್ತಾರೆ. ಅಂತಹವರಿಗೆ ಕೇವಲ 10 ರೂ.ಗೆ ಸಮೋಸ ನೀಡುತ್ತಾನೆ.

ವಿನೀತ್ ಸಮೋಸಾ ಶಾಪ್ ನಲ್ಲಿ ರಾಯತಾ ಸಮೋಸ ಬಹಳ ಫೇಮಸ್. ಇದಲ್ಲದೆ, ಮಟರ್ ಸಮೋಸಾದಂತಹ ವೈವಿಧ್ಯಮಯ ಸಮೋಸಾಗಳನ್ನು ಮಾರಾಟ ಮಾಡುವಲ್ಲಿಯೂ ಇದು ಜನಪ್ರಿಯವಾಗಿದೆ. ಮಾವಿನಕಾಯಿ ಚಟ್ನಿ ಮತ್ತು ಟೊಮೆಟೊ ಚಟ್ನಿಯಂತಹ ರುಚಿಕರವಾದ ಚಟ್ನಿಗಳೊಂದಿಗೆ ವಿತರಿಸಲಾಗುತ್ತದೆ. ವಿನೀತ್ ತಯಾರಿಸುವ ಈ ತರಹದ ಸಮೋಸಕ್ಕೆ ಒಳ್ಳೆಯ ಬೇಡಿಕೆ ಇದೆ. ಸಾಮಾನ್ಯವಾಗಿ, ವಾತಾವರಣವು ತಂಪಾಗಿರುವಾಗ, ಬಿಸಿಯಾದ ಸಮೋಸಗಳನ್ನು ತಿನ್ನುವುದು ಉತ್ತಮ.

ಏನೇ ಆಗಲಿ, ಜೀವನದಲ್ಲಿ ಸೋಲದೆ ವೆರೈಟಿಯ ಹೆಸರಲ್ಲಿ ಸಮೋಸಾ ಅಂಗಡಿ ಮಾಡಿ ಎಲ್ಲರ ಮನಸೆಳೆಯುತ್ತಿರುವ ವಿನೀತ್ ತಿವಾರಿಯಂತಹ ಯುವಕರು ಮಾದರಿ ಎನ್ನಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!