Monday, October 2, 2023

Latest Posts

ಮಧ್ಯರಾತ್ರಿ ತನಕ ಮ್ಯಾಚ್: ಸ್ವಿಗ್ಗಿಯಿಂದ ಹೆಚ್ಚು ಡೆಲಿವರಿ ಆಗಿದ್ದು ಯಾವುದು ಗೊತ್ತಾ?!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿನ್ನೆ ಐಪಿಎಲ್ 16ನೇ ಸೀಸನ್ ಮುಕ್ತಾಯವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ರೋಚಕ ಗೆಲುವು ಸಾಧಿಸಿ ದಾಖಲೆ ಸೃಷ್ಟಿಸಿದ್ದಾರೆ. ಮಳೆಯ ಕಾರಣದಿಂದ ಮ್ಯಾಚ್ ಡಿಲೇ ಆಗಿದ್ದು, ಮಧ್ಯರಾತ್ರಿವರೆಗೂ ಮ್ಯಾಚ್ ನಡೆದಿದೆ, ಸಾಕಷ್ಟು ಅಭಿಮಾನಿಗಳು ನಿದ್ದೆ ಬಿಟ್ಟು ಮ್ಯಾಚ್ ನೋಡಿದ್ದಾರೆ.

ಈ ಬಗ್ಗೆ ಸ್ವಿಗ್ಗಿ ಟ್ವೀಟ್ ಮಾಡಿದ್ದು, ಏಕಾಏಕಿ ಸಿಕ್ಕಾಪಟ್ಟೆ ಆರ್ಡರ್‌ಗಳು ಬಂದಿವೆ ಎಂದು ಹೇಳಿಕೊಂಡಿದೆ. ಮ್ಯಾಚ್ ನೋಡ್ತಾ ಪಿಝಾ ತರಿಸಿದ್ದಾರೆ ಎಂದು ಅಂದುಕೊಂಡ್ರಾ? ಇಲ್ಲ, ನಿನ್ನೆ ಹೆಚ್ಚು ಸೋಲ್ಡ್ ಔಟ್ ಆಗಿರುವುದು ಕಾಂಡೋಮ್ಸ್! ಹೌದು, ನಿನ್ನೆ ಸ್ವಿಗ್ಗಿ ಇನ್ಸ್ಟಾಮಾರ್ಟ್‌ನಲ್ಲಿ 2,423 ಕಾಂಡೋಮ್ಸ್ ಮನೆಗೆ ಡೆಲಿವರಿ ಮಾಡಲಾಗಿದೆ. ಈ ಬಗ್ಗೆ ತಮಾಷೆಯಾದ ಟ್ವೀಟ್‌ನ್ನು ಸ್ವಿಗ್ಗಿ ಮಾಡಿದ್ದು, ನಾನಾ ರೀತಿಯ ಕಮೆಂಟ್ಸ್ ಬಂದಿದೆ. ಮ್ಯಾಚ್ ಕ್ಲಿಪ್ಪಿಂಗ್ಸ್ ಜೊತೆ ಈ ಟ್ವೀಟ್ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

https://twitter.com/Swiggy/status/1663201821509263362?s=20

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!