ಮ್ಯಾಗಿ, ಪೆನ್ಸಿಲ್, ರಬ್ಬರ್‌ ರೇಟ್‌ ಜಾಸ್ತಿ: ಪ್ರಧಾನಿಗೆ ಪತ್ರ ಬರೆದ 6ರ ಬಾಲಕಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಸಂಬಂಧಿಸಿಉತ್ತರ ಪ್ರದೇಶದ ಕನೌಜ್‌ನ 6 ವರ್ಷದ ಮುಗ್ಧ ಬಾಲಕಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದ್ದಾಳೆ.

1ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಛಿಬ್ರಮೌ ಪಟ್ಟಣದ ನಿವಾಸಿಯಾದ ಕೃತಿ ದುಬೆ ಪ್ರಧಾನಿಗೆ ಪತ್ರ ಬರೆದಿರುವ ದಿಟ್ಟ ಬಾಲಕಿ. ಹಿಂದಿಯಲ್ಲಿ ಪತ್ರವನ್ನು ಬರೆದಿದ್ದು, ‘ನಮಸ್ಕಾರ ಮೋದಿಜಿ, ನೀವು ಅಪಾರ ಬೆಲೆ ಏರಿಕೆಗೆ ಕಾರಣರಾಗಿದ್ದೀರಿ. ‘ನನ್ನ ಅಭ್ಯಾಸಕ್ಕೆ ಅಗತ್ಯವಿರುವ ಪೆನ್ಸಿಲ್, ರಬ್ಬರ್​ ಬೆಲೆ ಸಹ ತುಟ್ಟಿಯಾಗಿದೆ. ನನಗೆ ಇಷ್ಟವಾದ ಮ್ಯಾಗಿಯ ಬೆಲೆಯೂ ದುಬಾರಿಯಾಗಿದೆ.ತಾಯಿಗೆ ಪೆನ್ಸಿಲ್​, ರಬ್ಬರ್​ ಕೇಳಿದಲ್ಲಿ ಕೊಡಿಸಲಾಗದ್ದಕ್ಕೆ ನನ್ನ ಮೇಲೆ ರೇಗುತ್ತಾರೆ. ದಬಾಯಿಸುತ್ತಾರೆ. ಕಲಿಕೆಗೆ ಇವೆಲ್ಲಾ ಅಗತ್ಯ. ನಾನೇನು ಮಾಡಲಿ ಎಂದು ಪ್ರಶ್ನಿಸಿದ್ದಾಳೆ. ಅಲ್ಲದೇ, ನನ್ನ ಸಹಪಾಠಿಗಳು ಪೆನ್ಸಿಲ್​ ಕದಿಯುತ್ತಾರೆ ಎಂದು ಬಾಲಕಿ ದೂರಿದ್ದಾಳೆ.

ಬಾಲಕಿಯ ತಂದೆ ವಿಶಾಲ್ ದುಬೆ ವೃತ್ತಿಯಲ್ಲಿ ವಕೀಲರು. ಈ ಪತ್ರ ತನ್ನ ಮಗಳ ಮನ್‌ ಕಿ ಬಾತ್‌ ಎಂದು ಅವರಿ ಹೇಳಿದ್ದಾರೆ. ಇತ್ತೀಚಿಗೆ ಶಾಲೆಯಲ್ಲಿ ಪೆನ್ಸಿಲ್ ಕಾಣೆಯಾಗಿದ್ದಕ್ಕೆ ತಾಯಿ ಗದರಿಸಿದಾಗ ಆಕೆಗೆ ಕೋಪ ಬಂದಿತ್ತು. ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಪತ್ರ ಬರೆದಿದ್ದಾಳೆ ಎನ್ನುತ್ತಾರೆ.

ಬಾಲಕಿ ಬರೆದ ಪತ್ರ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡಿದ್ದು, ಇದು ಅಲ್ಲಿನ ಶಿಕ್ಷಣಾಧಿಕಾರಿಗಳ ಗಮನಕ್ಕೂ ಬಂದಿದೆ. ಮಗುವಿಗೆ ಯಾವುದೇ ರೀತಿಯ ಸಹಾಯ ಮಾಡಲು ನಾವು ಸಿದ್ಧ. ಆಕೆ ಬರೆದ ಪತ್ರ ಸಂಬಂಧಪಟ್ಟವರಿಗೆ ತಲುಪುವಂತೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!