April 29, 2026
Wednesday, April 29, 2026
spot_img

ಪುದುಚೇರಿಯಲ್ಲಿ ಮತ್ತೆ ಮ್ಯಾಜಿಕ್: ಎರಡನೇ ಬಾರಿಗೆ ಎನ್‌ಡಿಎ ತೆಕ್ಕೆಗೆ ಅಧಿಕಾರ ಎಂದ ಎಕ್ಸಿಟ್​ ಪೋಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪುದುಚೇರಿ ಚುನಾವಣೆಯಲ್ಲಿ ಮತ್ತೆ ಬಿಜೆಪಿ ನೇತೃತ್ವದ ಎನ್‌ಡಿಎ ಎರಡನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣೋತ್ತರ ಸಮೀಕ್ಷೆ ಭವಿಷ್ಯ ನುಡಿದಿದೆ.

ಒಟ್ಟು 30 ವಿಧಾನಸಭಾ ಕ್ಷೇತ್ರಗಳ ಪೈಕಿ ಎನ್‌ಡಿಎ ಮೈತ್ರಿಕೂಟವು 16 ರಿಂದ 20 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದ್ದರೆ, ಕಾಂಗ್ರೆಸ್-ಡಿಎಂಕೆ ನೇತೃತ್ವದ ಮೈತ್ರಿಕೂಟವು ಕೇವಲ 6 ರಿಂದ 10 ಸ್ಥಾನಗಳಿಗೆ ತೃಪ್ತಿಪಡುವ ಸಾಧ್ಯತೆಯಿದೆ.

ಇನ್ನು ಈ ಬಾರಿ ನಟ ವಿಜಯ್ ನೇತೃತ್ವದ ಟಿವಿಕೆ-ಎನ್‌ಎಂಕೆ ಮೈತ್ರಿ ಪಕ್ಷ ಕೂಡ ಅಖಾಡದಲ್ಲಿದ್ದು, ಎರಡರಿಂದ ನಾಲ್ಕು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಸಮೀಕ್ಷೆ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !