‘ಮಹಾ’ ಸಿಎಂ ಏಕನಾಥ್‌ ಶಿಂಧೆ ಬಣ ನಿಜವಾದ ಶಿವಸೇನೆ: ಸ್ಪೀಕರ್‌ ರಾಹುಲ್ ನಾರ್ವೇಕರ್ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ನೇತೃತ್ವದ ಶಿವಸೇನೆಯೇ ನಿಜವಾದ ಶಿವಸೇನೆ ಪಕ್ಷ ಎಂದು ಮಹಾರಾಷ್ಟ್ರ ಸ್ಪೀಕರ್‌ ರಾಹುಲ್ ನಾರ್ವೇಕರ್ ಬುಧವಾರ ಆದೇಶ ನೀಡಿದ್ದಾರೆ.

ಈ ಮೂಲಕ ಬಾಳಾ ಠಾಕ್ರೆ ಸ್ಥಾಪಿಸಿದ್ದ ಶಿವಸೇನೆ ಪಕ್ಷ ಇಂದು ಅಧಿಕೃತವಾಗಿ ಠಾಕ್ರೆ ಕುಟುಂಬದ ಮುಷ್ಠಿಯಿಂದ ಹೊರಬಂದಂತಾಗಿದೆ.

‘ಎರಡೂ ಪಕ್ಷಗಳು (ಶಿವಸೇನೆಯ ಎರಡು ಬಣಗಳು) ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪಕ್ಷದ ಸಂವಿಧಾನದ ಬಗ್ಗೆ ಯಾವುದೇ ಒಮ್ಮತವಿಲ್ಲ. ನಾಯಕತ್ವ ರಚನೆಯ ಬಗ್ಗೆ ಎರಡು ಪಕ್ಷಗಳು ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿವೆ. ಇಲ್ಲಿನ ಏಕೈಕ ಅಂಶವೆಂದರೆ ಅದು ಬಹುಮತ. ಯಾಕೆಂದರೆ, ಅದು ಶಾಸಕಾಂಗ ಪಕ್ಷ. ವಿವಾದದ ಮೊದಲು ಅಸ್ತಿತ್ವದಲ್ಲಿದ್ದ ನಾಯಕತ್ವ ರಚನೆಯನ್ನು ಗಣನೆಗೆ ತೆಗೆದುಕೊಳ್ಳಬೇಕಾದ ಸಂಬಂಧಿತ ಪಕ್ಷದ ಸಂವಿಧಾನವನ್ನು ನಾನು ನಿರ್ಧರಿಸಬೇಕಾಗುತ್ತದೆ’ ಎಂದು ಶಿವಸೇನೆ ಶಾಸಕರ ಅನರ್ಹತೆ ಪ್ರಕರಣದಲ್ಲಿ ಮಹಾರಾಷ್ಟ್ರ ಅಸೆಂಬ್ಲಿ ಸ್ಪೀಕರ್ ರಾಹುಲ್ ನಾರ್ವೇಕರ್ ಹೇಳಿದ್ದಾರೆ.

ಶಿವಸೇನೆಯ 2018 ರ ತಿದ್ದುಪಡಿ ಸಂವಿಧಾನವು ಭಾರತದ ಚುನಾವಣಾ ಆಯೋಗದ ದಾಖಲೆಗಳಲ್ಲಿ ಇಲ್ಲದಿರುವುದರಿಂದ ಅದನ್ನು ಮಾನ್ಯವೆಂದು ಪರಿಗಣಿಸಲಾಗುವುದಿಲ್ಲ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಪಕ್ಷದ ಸಂವಿಧಾನವು ಮಾನ್ಯವಾಗಿರುವ ಯಾವುದೇ ಅಂಶವನ್ನು ನಾನು ಪರಿಶೀಲಿಸಲು ಸಾಧ್ಯವಿಲ್ಲ. ದಾಖಲೆಗಳ ಪ್ರಕಾರ, ನಾನು 1999 ರ ಶಿವಸೇನೆಯ ನಿಯಮವನ್ನೇ ಮಾನ್ಯ ಸಂವಿಧಾನವಾಗಿ ಅವಲಂಬಿಸುತ್ತಿದ್ದೇನೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!