ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಗ್ರಾಜ್ ಮಹಾಕುಂಭಮೇಳಕ್ಕೆ ಭಕ್ತಸಾಗರಹರಿದು ಬರುತ್ತಿದ್ದು, ಮೌನಿ ಅಮಾವಾಸ್ಯೆಯ ದಿನವಾದಬುಧವಾರ ಒಂದೇ ದಿನ 7 ಕೋಟಿ 50 ಲಕ್ಷ ಭಕ್ತರು ಅಮೃತಸ್ನಾನ ಮಾಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಮೌನಿ ಅಮಾವಾಸ್ಯೆಯ ಬಳಿಕವೂ ಕೋಟ್ಯಾಂತರ ಜನ ಪುಣ್ಯಸ್ನಾನ ಮಾಡಲು ಪ್ರಯಾಗ್ರಾಜ್ಗೆ ಪ್ರಯಾಣ ಬೆಳೆಸುತ್ತಿದ್ದಾರೆ.
ಜನವರಿ 29ರ ಮೌನಿ ಅಮಾವಾಸ್ಯೆಯಂದು ಉತ್ತರ ಪ್ರದೇಶ ಸರ್ಕಾರಕ್ಕೆ 8-10 ಕೋಟಿ ಭಕ್ತಾದಿಗಳು ಪುಣ್ಯ ಸ್ನಾನ ಮಾಡುವ ನಿರೀಕ್ಷೆ ಇತ್ತು. ಆದರೆ ಒಂದೇ ದಿನ 7 ಕೋಟಿ 50 ಲಕ್ಷ ಭಕ್ತಾದಿಗಳು ಅಮೃತ ಸ್ನಾನ ಮಾಡಿದ್ದಾರೆ.
ಇನ್ನು, ಮಹಾಕುಂಭಮೇಳದ ಹಿನ್ನೆಲೆಯಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಮಹಾಕುಂಭಮೇಳಕ್ಕೆ ಜನರು ಆಗಮಿಸಲು ಸಕಲ ವ್ಯವಸ್ಥೆ ಮಾಡಬೇಕು. ವಿಶೇಷ ರೈಲು, ವಿಶೇಷ ಬಸ್ ವ್ಯವಸ್ಥೆ ಮುಂದುವರಿಸಲು ಅಧಿಕಾರಿಗಳಿಗೆ ಸಿಎಂ ಯೋಗಿ ಆದಿತ್ಯನಾಥ್ ನಿರ್ದೇಶನ ನೀಡಿದ್ದಾರೆ.
ಪ್ರಯಾಗರಾಜ್ ಸುತ್ತಲಿನ 7-8 ಜಿಲ್ಲೆಗಳ ಅಧಿಕಾರಿಗಳಿಗೂ ಅಲರ್ಟ್ ಆಗಿರಲು ಸೂಚನೆ ನೀಡಲಾಗಿದೆ. ಮಹಾಕುಂಭಾಮೇಳಕ್ಕೆ ಬಂದ ಸ್ಪೆಷಲ್ ಟ್ರೇನ್, ಬಸ್ ಮೂಲಕ ವಾಪಸಾಗಲು ವ್ಯವಸ್ಥೆ ಇರಬೇಕು. ಅಯೋಧ್ಯೆ, ವಾರಣಾಸಿ, ಚಿತ್ರಕೂಟ ಜಿಲ್ಲೆಗಳ ಅಧಿಕಾರಿಗಳು ಅಲರ್ಟ್ ಆಗಿರುವಂತೆ ಸೂಚನೆ ನೀಡಲಾಗಿದೆ.