Monday, October 2, 2023

Latest Posts

ಮಹಾಭಾರತದ ಶಕುನಿ ಮಾಮಾನ ಅರೋಗ್ಯ ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಹಾಭಾರತದಲ್ಲಿ ಶಕುನಿ (Shakuni) ಎಂದಾಕ್ಷಣ ಕಣ್ಮುಂದೆ ಬರುತ್ತೆ ಆ ಚಿತ್ರಣ. 1988ರಿಂದ 1990ರ ವರೆಗೆ ದೂರದರ್ಶನದಲ್ಲಿ ಬರುತ್ತಿದ್ದ ಮಹಾಭಾರತ ಧಾರಾವಾಹಿ. ಮಹಾಭಾರತವನ್ನು ನೋಡಿದ ವೀಕ್ಷಕರಿಗೆ ಶಕುನಿ ಎಂದಾಕ್ಷಣ ನೆನಪಾಗುವುದು 80ರ ದಶಕದ ಶಕುನಿ ಮಾಮಾ .

ಅವರ ಮೂಲ ಹೆಸರು ಗೂಫಿ ಪೈಂಟಲ್. ಕುಳ್ಳಗಿನ ದೇಹ, ಒಂದು ಕಣ್ಣನ್ನು ಸಣ್ಣಗೆ ಮಾಡಿಕೊಂಡು ಕುಂಟುತ್ತಾ ಬರುವ ಆ ಪಾತ್ರವನ್ನು ಯಾರು ಮರೆಯಲು ಸಾಧ್ಯವಿಲ್ಲ. ಇದೀಗ ಅವರಿಗೆ 78 ವರ್ಷ ವಯಸ್ಸು. ವಯೋ ಸಹಜ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ನಟನ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅವರ ಸ್ಥಿತಿ ತುಂಬಾ ಗಂಭೀರವಾಗಿದೆ ಎನ್ನಲಾಗಿದೆ. ಖ್ಯಾತ ಚಲನಚಿತ್ರ ಮತ್ತು ಕಿರುತೆರೆ ನಟಿ ಟೀನಾ ಘಾಯ್ ಇದನ್ನು ಖಚಿತಪಡಿಸಿದ್ದಾರೆ. ಉತ್ತಮ ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ನಟಿ ಹೇಳಿದ್ದಾರೆ.

ಗೂಫಿ ಅವರ ಬಗ್ಗೆ ಹಲವರಿಗೆ ತಿಳಿಯದ ಕೆಲವು ಕುತೂಹಲದ ಘಟನೆಗಳಿವೆ. ಹಿಂದಿ ಚಲನಚಿತ್ರಗಳ ಹೊರತಾಗಿ, 1980 ರ ದಶಕದಲ್ಲಿ ಗೂಫಿ ಪೈಂಟಲ್ ಕೆಲವು ಟಿವಿ ಧಾರಾವಾಹಿಗಳಲ್ಲಿ (Serials) ಕಾಣಿಸಿಕೊಂಡಿದ್ದರು. ಅಕ್ಟೋಬರ್ 4, 1944 ರಂದು ಪಂಜಾಬ್‌ನ ತರ್ನ್ ತರನ್‌ನಲ್ಲಿ ಸಿಖ್ ಕುಟುಂಬದಲ್ಲಿ ಜನಿಸಿದ ಗುಫಿ ಪೈಂಟಲ್ ಅವರು ನಟನೆಗೆ ಮುಂದಾಗುವ ಮೊದಲು ಎಂಜಿನಿಯರ್ ಆಗಿದ್ದರು. ಅವರು ತಮ್ಮ ವೃತ್ತಿಜೀವನವನ್ನು ಎಂಜಿನಿಯರಿಂಗ್‌ನಲ್ಲಿ ಮಾತ್ರ ಪ್ರಾರಂಭಿಸಿದರು. 1969 ರಲ್ಲಿ ಅವರ ತಮ್ಮನ ಜೊತೆ ಮುಂಬೈ ತಲುಪಿದರು. ಇಲ್ಲಿ ಅವರು ಮಾಡೆಲಿಂಗ್ ಜೊತೆಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು.

ಬಿಆರ್ ಚೋಪ್ರಾ ಅವರ ಧಾರಾವಾಹಿ ಮಹಾಭಾರತದಲ್ಲಿ ಮಾಮಾ ಶಕುನಿ (Mama Shakuni) ಪಾತ್ರದಲ್ಲಿ ಗೂಫಿ ಪೈಂಟಲ್ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಆದರೆ, ಅವರು ಶ್ರೀ ಚೈತನ್ಯ ಮಹಾಪ್ರಭು ಎಂಬ ಚಿತ್ರವನ್ನು ಸಹ ನಿರ್ದೇಶಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!