Monday, October 2, 2023

Latest Posts

ನಳೀನ್ , ಬೊಮ್ಮಾಯಿ ನಿಮ್ಮ ಮನೆಗೂ ವಿದ್ಯುತ್ ಫ್ರೀ: ಗ್ಯಾರೆಂಟಿ ಜಾರಿ ಬೆನ್ನಲ್ಲೇ ಬಿಜೆಪಿ ಕಾಲೆಳೆದ ಕಾಂಗ್ರೆಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯ ಕಾಂಗ್ರೆಸ್ ಸರಕಾರ ಉಚಿತ ಗ್ಯಾರೆಂಟಿ ಯೋಜನೆಯನ್ನು ಸಿದ್ದರಾಮಯ್ಯ ಸರ್ಕಾರ ಜಾರಿಗೊಳಿಸಿದೆ.

ಘೋಷಣೆ ಬೆನ್ನಲ್ಲೇ ಯೋಜನೆಯನ್ನು ಪ್ರಶ್ನಿಸಿದ್ದ ಬಿಜೆಪಿ ವಿರುದ್ಧ ಟ್ವೀಟ್ ಮೂಲಕ ತಿರುಗೇಟು ನೀಡಿದೆ.
ಈ ಬಗ್ಗೆ ಈ ಹಿಂದೆ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್, ಮಾಜಿ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವೆಗೆ ಟಾಂಗ್ ನೀಡಿ ಕಾಂಗ್ರೆಸ್ ಇಂದು ಯೋಜನೆ ಜಾರಿಯ ಘೋಷಣೆ ಬಳಿಕ ಟ್ವಿಟ್ ಮಾಡಿದೆ.

ಈ ಬಗ್ಗೆ ಟ್ವಿಟ್ ಮಾಡಿರುವಂತ ಕರ್ನಾಟಕ ಕಾಂಗ್ರೆಸ್ ( Karnataka Congress ) ನಳೀನ್ ಕುಮಾರ್ ಕಟೀಲ್ ಅವರೇ ನಿಮ್ಮ ಮನೆಗೂ 200 ಯೂನಿಟ್ ವಿದ್ಯುತ್ ಫ್ರೀ. ಬಸವರಾಜ ಬೊಮ್ಮಾಯಿ ಅವರೆ, ನಿಮ್ಮ ಮನೆಗೂ ಫ್ರೀ! ಶೋಭಾ ಕಂದ್ಲಾಜೆ ಅವರೇ, ನಿಮಗೂ ಪ್ರಯಾಣ ಫ್ರೀ. ಸಿಟಿ ರವಿ ಅವರೇ ನಿಮ್ಮ ಮನೆಯವರಿಗೂ ರೂ.2000 ಫ್ರೀ! ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ, (ಪದವಿ ಪಡೆದಿದ್ದವರಿದ್ರೆ ಮಾತ್ರ)! ಇದು ನಮ್ಮ ಗ್ಯಾರಂಟಿ ಎಂಬುದಾಗಿ ಹೇಳಿದೆ.

https://twitter.com/INCKarnataka/status/1664585254865338369?ref_src=twsrc%5Etfw%7Ctwcamp%5Etweetembed%7Ctwterm%5E1664585254865338369%7Ctwgr%5E48545e770e94bf1c07535fdf7e10244c3f68abb6%7Ctwcon%5Es1_&ref_url=https%3A%2F%2Fstatic.asianetnews.com%2Ftwitter-iframe%2Fshow.html%3Furl%3Dhttps%3A%2F%2Ftwitter.com%2FINCKarnataka%2Fstatus%2F1664585254865338369%3Fref_src%3Dtwsrc5Etfw

ಇದೀಗ ಬಿಜೆಪಿ ವಿರುದ್ಧ ಟ್ವೀಟ್‌ ಮಾಡಿದ ಕಾಂಗ್ರೆಸ್ ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ ಅನ್ನೋ ವಾಕ್ಯ ಸೇರಿಸಿದ್ದು, ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರುದ್ಯೋಗಳಿಗೆ ಫ್ರೀ ಒಕೆ ಇದರಲ್ಲಿ ಬಜರಂಗದಳ ನಿರುದ್ಯೋಗಿಗಳು ಅನ್ನೋ ಪದ ಯಾಕೆ ಎಂದು ಹಲವರು ಪ್ರಶ್ನಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!