ಮಹಾದೇವ ಬೆಟ್ಟಿಂಗ್ App ಮಾಲೀಕ ದುಬೈನಲ್ಲಿ ಅರೆಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹದೇವ ಬೆಟ್ಟಿಂಗ್ ಆಪ್ ಮಾಲೀಕ ರವಿ ಉಪ್ಪಳ್‌ರನ್ನ ದುಬೈನಲ್ಲಿ ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ರವಿ ಉಪ್ಪಳ್ ಬಂಧನಕ್ಕೆ ಇ.ಡಿ.ಮನವಿ ಮಾಡಿದ್ದು, ಈ ಮನವಿ ಮೇರೆಗೆ ಇಂಟರ್‌ಪೋಲ್ ಕಾರ್ನರ್‌ಗೆ ನೊಟೀಸ್ ಹೊರಡಿಸಲಾಗಿತ್ತು. ಇದರ ನೆರವಿನಿಂದಾಗಿ ದುಬೈನಲ್ಲಿ ರವಿ ಉಪ್ಪಳ್‌ನ್ನು ಬಂಧಿಸಲಾಗಿದೆ.

ಮಹದೇವ ಬೆಟ್ಟಿಂಗ್ ಆಪ್‌ಗೆ ಇಬ್ಬರು ಮಾಲೀಕರಿದ್ದಾರೆ. ಇದೀಗ ರವಿ ಉಪ್ಪಳ್‌ನ್ನು ಪೊಲೀಸರು ಬಂಧಿಸಿದ್ದಾರೆ. ರವಿ ಹಾಗೂ ಇನ್ನೊಬ್ಬ ಮಾಲೀಕ ಸೌರಭ್ ಚಂದ್ರಕರ್ ಮೇಲೆ ಇ.ಡಿ. ಅಕ್ರಮ ಹಣ ವರ್ಗಾವಣೆ ಕೇಸ್ ದಾಖಲಿಸಿದೆ.

ಆಪ್ ಮೂಲಕ ಬೆಟ್ಟಿಂಗ್ ದಂಧೆ ನಡೆಸಿ, ಅಕ್ರಮ ಹಣ ಸಂಗ್ರಹ ಹಾಗೂ ವರ್ಗಾವಣೆ ಮಾಡಿದ ಆರೋಪವನ್ನು ಇಬ್ಬರೂ ಎದುರಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!