ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾಕುಂಭ ಮೇಳ 2025 ನಡೆಯುತ್ತಿರವ ಪ್ರಯಾಗ್ ರಾಜ್ ನಲ್ಲಿ ಪುಣ್ಯ ಸ್ನಾನ ಮಾಡಲು ಜನಸಾಗರ ಹರಿದುಬರುತ್ತಿದೆ. ಉತ್ತರ ಪ್ರದೇಶ ಸರ್ಕಾರದ ಮಾಹಿತಿಯ ಪ್ರಕಾರ ಮಂಗಳವಾರ ಮಧ್ಯಾಹ್ನದವರೆಗೂ ತ್ರಿವೇಣಿ ಸಂಗಮದಲ್ಲಿ ಒಟ್ಟು 2.39 ಕೋಟಿ ಮಂದಿ ಅಮೃತ ಸ್ನಾನ ಮಾಡಿದ್ದಾರೆ. ಈ ಪೈಕಿ 1 ಕೋಟಿ ಕಲ್ಪವಾಸಿಗಳೂ ಸೇರಿದ್ದಾರೆ.
ಇನ್ನು ಜ.13 ರಂದು ಕುಂಭಮೇಳ ಪ್ರಾರಂಭವಾದಾಗಿನಿಂದಲೂ ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮದಲ್ಲಿ ಒಟ್ಟು 14 ಕೋಟಿಗೂ ಹೆಚ್ಚು ಮಂದಿ (147.6) ಮಿಂದೆದ್ದಿದ್ದಾರೆ. ಜ.29 ರಂದು ಎರಡನೇ ಅಮೃತ ಸ್ನಾನ ನಡೆಯುತ್ತಿದ್ದು, 10 ಕೋಟಿ ಮಂದಿ ಇದರಲ್ಲಿ ಭಾಗಿಯಾಗಲಿದ್ದಾರೆ ಎಂಬ ನಿರೀಕ್ಷೆ ಇದೆ ಈ ಸಂಖ್ಯೆ ದಾಟಿದರೆ, ಕುಂಭಮೇಳದ ಮೊದಲ 15 ದಿನಗಳಲ್ಲಿ ಅಮೃತ ಸ್ನಾನ ಮಾಡಿದ ಭಕ್ತಾದಿಗಳ ಸಂಖ್ಯೆ 15 ಕೋಟಿಯನ್ನು ಮೀರಲಿದೆ.