Tuesday, August 16, 2022

Latest Posts

ಆ.7ರಿಂದ KSCA ʼಮಹಾರಾಜ ಟಿ20 ಲೀಗ್ ಆರಂಭ: ಯಾವ ಆಟಗಾರ ಯಾವ ತಂಡದ ಪಾಲು? ಇಲ್ಲಿದೆ ಮಾಹಿತಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ (KSCA) ಆಯೋಜಿಸುತ್ತಿರುವ ʼಮಹಾರಾಜ ಟ್ರೋಫಿʼ T20 ಪಂದ್ಯಾವಳಿಯು ಆಗಸ್ಟ್ 7 ರಂದು ಪ್ರಾರಂಭವಾಗಲಿದೆ.
ಕೆಪಿಎಲ್‌ ಬದಲಿಯಾಗಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ರಾಜ್ಯದ ಆರು ತಂಡಗಳು ಸೆಣಸಾಟ ನಡೆಸಲಿವೆ. ಅವುಗಳೆಂದರೆ ಶಿವಮೊಗ್ಗ ಸ್ಟ್ರೈಕರ್ಸ್, ಮೈಸೂರು ವಾರಿಯರ್ಸ್, ಹುಬ್ಬಳ್ಳಿ ಟೈಗರ್ಸ್, ಮಂಗಳೂರು ಯುನೈಟೆಡ್, ಗುಲ್ಬರ್ಗಾ ಮಿಸ್ಟಿಕ್ಸ್ ಮತ್ತು ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್. ಮೊದಲ ಲೀಗ್‌ ಹಂತದಲ್ಲಿ 18 ಪಂದ್ಯಗಳು ನಡೆಯಲಿವೆ.
ಈ ಪಂದ್ಯಗಳನ್ನು ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಆಯೋಜಿಸಲಾಗಿದೆ. 16 ಪಂದ್ಯಗಳನ್ನು ಒಳಗೊಂಡ ಎರಡನೇ ಲೆಗ್ ಅನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ. ಆಗಸ್ಟ್ 26ರಂದು ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ.
ಕರ್ನಾಟಕರ ಪ್ರಖ್ಯಾತ ಆಟಗಾರರಾದ ಮನೀಷ್ ಪಾಂಡೆ, ಕೆ. ಗೌತಮ್, ಕರುಣ್ ನಾಯರ್, ದೇವದತ್ ಪಡಿಕ್ಕಲ್, ಅಭಿಮನ್ಯು ಮಿಥುನ್ ಮುಂತಾದ ಆಟಗಾರರು ಟೂರ್ನಿಯಲ್ಲಿ ಭಾಗಿಯಾಗಲಿದ್ದಾರೆ.

ಮಹಾರಾಜ ಟ್ರೋಫಿ ತಂಡಗಳು ಹೀಗಿವೆ..
ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್: ಮಯಾಂಕ್ ಅಗರ್ವಾಲ್, ಸುಚಿತ್ ಜೆ, ಅನಿರುಧಾ ಜೋಶಿ, ಪ್ರದೀಪ್ ಟಿ, ಕ್ರಾಂತಿ ಕುಮಾರ್, ಚೇತನ್ ಎಲ್ಆರ್, ಅನೀಶ್ ಕೆವಿ, ಕುಮಾರ್ ಎಲ್ಆರ್, ರಕ್ಷಿತ್ ಎಸ್, ರಿಷಿ ಬೋಪಣ್ಣ, ಸಂತೋಕ್ ಸಿಂಗ್, ಸೂರಜ್ ಅಹುಜಾ (ಡಬ್ಲ್ಯುಕೆ), ಪಿ ಗುರ್ಬಕ್ಸ್ ಆರ್ಯ, ಲೋಚನ್ ಗೌಡ, ರೋನಿತ್ ಮೋರ್, ಶಾನ್ ಟ್ರಿಸ್ಟಾನ್ ಜೋಸೆಫ್, ಕುಶ್ ಮರಾಟೆ, ತನಯ್ ವಾಲ್ಮಿಕ್.

ಹುಬ್ಬಳ್ಳಿ ಟೈಗರ್ಸ್: ಅಭಿಮನ್ಯು ಮಿಥುನ್, ಲುವ್ನಿತ್ ಸಿಸೋಡಿಯಾ (ಡಬ್ಲ್ಯುಕೆ), ಕೌಶಿಕ್ ವಿ, ಲಿಯಾನ್ ಖಾನ್, ನವೀನ್ ಎಂಜಿ, ಆನಂದ್ ದೊಡ್ಡಮನಿ, ಶಿವಕುಮಾರ್ ಬಿಯು, ತುಷಾರ್ ಸಿಂಗ್, ಆಕ್ಷನ್ ರಾವ್, ಜಹೂರ್ ಫಾರೂಕಿ, ರೋಹನ್ ನವೀನ್, ಸೌರವ್ ಶ್ರೀವಾಸ್ತವ್, ಸಾಗರ್ ಸೋಲಂಕಿ ( ಡಬ್ಲ್ಯುಕೆ), ಗೌತಮ್ ಸಾಗರ್, ರೋಷನ್ ಅಶ್ವಥಿಯಾ, ರಾಹುಲ್ ಸಿಂಗ್ ರಾವತ್, ಶಿಶಿರ್ ಭವಾನೆ, ಶರಣ್ ಗೌಡ್.

ಗುಲ್ಬರ್ಗ ಮಿಸ್ಟಿಕ್ಸ್: ಮನೀಶ್ ಪಾಂಡೆ, ದೇವದತ್ ಪಡಿಕ್ಕಲ್, ಕಾರ್ತಿಕ್ ಸಿಎ, ಮನೋಜ್ ಭಾಂಡಗೆ, ವಿದ್ವತ್ ಕಾವೇರಪ್ಪ, ಕೃತಿಕ್ ಕೃಷ್ಣ, ಅಭಿಲಾಷ್ ಶೆಟ್ಟಿ, ಕುಶಾಲ್ ಎಂ ವಾಧ್ವಾನಿ, ಪ್ರಣವ್ ಭಾಟಿಯಾ, ಶ್ರೀಜಿತ್ ಕೆಎಲ್ (ಡಬ್ಲ್ಯುಕೆ), ರಿತೇಶ್ ಭಟ್ಕಳ್, ಮೋಹಿತ್ ಬಿಎ, ರೋಹನ್ ಪಾಟೀಲ್ , ಧನುಷ್ ಗೌಡ, ಮೊಹಮ್ಮದ್ ಅಕಿಬ್ ಜವಾದ್, ಶ್ರೀಶ ಆಚಾರ್, ಜೇಶ್ವಂತ್ ಆಚಾರ್ಯ, ಆರನ್ ಕ್ರಿಸ್ಟಿ.

ಮಂಗಳೂರು ಯುನೈಟೆಡ್: ಅಭಿನವ್ ಮನೋಹರ್, ಸಮರ್ಥ್ ಆರ್, ವೈಶಾಕ್ ವಿ, ಅಮಿತ್ ವರ್ಮಾ, ವೆಂಕಟೇಶ್ ಎಂ, ಅನೀಶ್ವರ್ ಗೌತಮ್, ಸುಜಯ್ ಸಾತೇರಿ, ರೋಹಿತ್ ಕುಮಾರ್ ಎಸಿ, ಮ್ಯಾಕ್ನೀಲ್ ನೊರೊನ್ಹಾ, ಶರತ್ ಎಚ್‌ಎಸ್, ಶಶಿಕುಮಾರ್ ಕೆ, ನಿಕಿನ್ ಜೋಸ್ ಎಸ್‌ಜೆ, ರಘುವೀರ್ ಪಾವಲೂರ್, ಅಮೋಘ್. ಎಸ್, ಚಿನ್ಮಯ್ ಎನ್ ಎ, ಆದಿತ್ಯ ಸೋಮಣ್ಣ, ಯಶೋವರ್ಧನ್ ಪರಂತಪ್, ಧೀರಜ್ ಜೆ ಗೌಡ.

ಶಿವಮೊಗ್ಗ ಸ್ಟ್ರೈಕರ್ಸ್: ಕೆ ಗೌತಮ್, ಕೆಸಿ ಕಾರಿಯಪ್ಪ, ರೋಹನ್ ಕದಂ, ಸಿದ್ಧಾರ್ಥ್ ಕೆವಿ, ದರ್ಶನ್ ಎಂಬಿ, ಸ್ಟಾಲಿನ್ ಹೂವರ್, ಅವಿನಾಶ್ ಡಿ, ಸ್ಮರಣ್ ಆರ್, ಶರತ್ ಬಿಆರ್ (ಡಬ್ಲ್ಯುಕೆ), ರಾಜವೀರ್ ವಾಧ್ವಾ, ರಾಜೇಂದ್ರ ಡಂಗನವರ್, ಉತ್ತಮ್ ಅಯ್ಯಪ್ಪ, ಚೈತನ್ಯ ಎಸ್, ಶ್ರೇಯಸ್ ಬಿಎಂ, ಕೆಎಸ್ ದೇವಯ್ಯ, ವಿನಯ್ ಸಾಗರ್, ಶ್ರೇಯಸ್ ಎಸ್ಪಿ, ಪುನಿತ್ ಎಸ್.

ಮೈಸೂರು ವಾರಿಯರ್ಸ್: ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಶುಭಾಂಗ್ ಹೆಗ್ಡೆ, ಪವನ್ ದೇಶಪಾಂಡೆ, ವಿದ್ಯಾಧರ್ ಪಾಟೀಲ್, ನಿಹಾಲ್ ಉಳ್ಳಾಲ್, ಪ್ರತೀಕ್ ಜೈನ್, ಲೋಚನ್ ಅಪ್ಪಣ್ಣ, ಚಿರಂಜೀವಿ ಜಿಎಸ್, ನಾಗ ಭರತ್, ಭರತ್ ದೂರಿ, ಶಿವರಾಜ್ ಎಸ್, ಮೋನಿಶ್ ರೆಡ್ಡಿ, ವರುಣ್ ರಾವ್ ಟಿಎನ್, ರಾಹುಲ್ ಪ್ರಸನ್ನ, ನಿತಿನ್ ಭಿಲ್ಲೆ, ಆದಿತ್ಯ ಗೋಯಲ್, ಅಭಿಷೇಕ್ ಅಹ್ಲಾವತ್.

ಟೂರ್ನಿ ಪ್ರಸಾರದ ವಿವರಗಳು:
ಟಿವಿ: ಸ್ಟಾರ್ ಸ್ಪೋರ್ಟ್ಸ್ 2 ಮತ್ತು ಸ್ಟಾರ್ ಸ್ಪೋರ್ಟ್ಸ್ ಕನ್ನಡ
ಲೈವ್ ಸ್ಟ್ರೀಮಿಂಗ್: ಫ್ಯಾನ್‌ಕೋಡ್ ಅಪ್ಲಿಕೇಶನ್

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss