ಮಹಾಲಕ್ಷ್ಮಿಗೆ ಸಿಹಿ ಪೊಂಗಲ್‌ ನೈವೇದ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಾಳೆ ವರಮಹಾಲಕ್ಷ್ಮಿ ವ್ರತ. ಅಮ್ಮನವರ ಪೂಜೆ ಮಾಡುವವರು ದೇವರಿಗೆ ಸಿಹಿ ಪೊಂಗಲ್‌ ನೈವೇದ್ಯ ಮಾಡಿದರೆ ತಾಯಿ ಪ್ರಸನ್ನನಳಾಗುತ್ತಾಳೆ ಎಂಬುದು ನಂಬಿಕೆ. ಈ ರೀತಿ ಅತ್ಯಂತ ಸುಲಭವಾಗಿ ಮಾಡಿ

ಬೇಕಾಗುವ ಪದಾರ್ಥಗಳು:

3/4 ಕಪ್ ಅಕ್ಕಿ
1/4 ಕಪ್ ಹೆಸರುಬೇಳೆ
1/2 ಕಪ್ ಬೆಲ್ಲ
3/4 ಕಪ್ ಸಕ್ಕರೆ
1 ಟೀಸ್ಪೂನ್ ಏಲಕ್ಕಿ ಪುಡಿ
15 ಗೋಡಂಬಿ
10 ಒಣದ್ರಾಕ್ಷಿ
3 ತೆಂಗಿನ ಕಾತಿ ಚೂರು
ಪಂಚ ಕರ್ಪೂರ – ಚಿಟಿಕೆ
6 ಚಮಚ ತುಪ್ಪ

ಮಾಡುವ ವಿಧಾನ: 

ಮೊದಲಿಗೆ ಒಂದು ಬಾಣಲೆಯಲ್ಲಿ ಹೆಸರು ಬೇಳೆ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಿ. ಕುಕ್ಕರ್‌ನಲ್ಲಿ ತೊಳೆದ ಅಕ್ಕಿ ಹಾಗೂ ಹೆಸರುಬೇಳೆ ಹಾಕಿ 2/3ಸೀಟಿ ಹೊಡೆಸಿ ತೆಗೆದಿಡಿ. ಒಂದು ಪಾತ್ರೆಯಲ್ಲಿ ಅರ್ಥ ಕಪ್‌ ಬೆಲ್ಲ, ಸಕ್ಕರೆ ಹಾಕಿ ಅದಕ್ಕೆ ಅರ್ಧ ಲೋಟ ನೀರು ಹಾಕಿ ಪಾಕ ಸ್ವಲ್ಪ ಅಂಟುವವರೆಗೆ ಕುದಿಸಿ ಮಾಡಿಟ್ಟ ಅನ್ನದೊಳಗೆ ಮಿಕ್ಸ್‌ ಮಾಡಿ ಪಾಕ ಹೀರುವವರೆಗೆ ಮೀಡಿಯಮ್‌ ಫ್ಲೇಮ್‌ನಲ್ಲಿ ಬೇಯಿಸಿ. ಈಗ ಇದಕ್ಕೆ ತುಪ್ಪ ಬಿಸಿ ಮಾಡಿ ಅದರೊಳಗೆ ತೆಂಗಿನ ಕಾಯಿ ಸಣ್ಣ ಹೋಳು, ಗೋಡಂಬಿ, ದ್ರಾಕ್ಷಿ ಹಾಕಿ ಹುರಿದು ಅದನ್ನು ಅನ್ನದೊಳಗೆ ಮಿಕ್ಸ್‌ ಮಾಡಿ. ಏಲಕ್ಕಿ ಪುಡಿ/ಪಂಚ ಕರ್ಪೂರದ ಪುಡಿ ಹಾಕಿ ಕೊನೆಗೆ ತುಪ್ಪ ಹಾಕಿ ಕೆಳಗಿಸಿದರೆ ಸಿಹಿ ಪೊಂಗಲ್‌ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!