ಸಂಸದರು, ಶಾಸಕರೊಂದಿಗೆ ಇಂದು ಅಯೋಧ್ಯೆಗೆ ಮಹಾ ಸಿಎಂ ಭೇಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಹಾರಾಷ್ಟ್ರ ಮುಖ್ಯಮಂತ್ರಿ ಇಂದು ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಸಿಎಂ ಏಕನಾಥ್ ಶಿಂಧೆ ಶಾಸಕರು ಮತ್ತು ಸಂಸದರೊಂದಿಗೆ ಅಯೋಧ್ಯೆ ರಾಮನ ದರ್ಶನ ಮಾಡಲಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಸಿಎಂ ಆಗಿ ಆಯ್ಕೆಯಾದ ನಂತರ ಅವರು ಮೊದಲ ಬಾರಿಗೆ ಅಯೋಧ್ಯೆಗೆ ಬಂದಿದ್ದರು. ಶನಿವಾರ ಅವರು ತಮ್ಮ ಶಾಸಕರೊಂದಿಗೆ ಅಯೋಧ್ಯೆಗೆ ತೆರಳಿದ್ದಾರೆ. ನಗರದ ಎಲ್ಲಾ ಹೋಟೆಲ್‌ ಮತ್ತು ಅತಿಥಿಗೃಹಗಳನ್ನು ಕಾಯ್ದಿರಿಸಲಾಗಿದೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೂಡ ಇಂದು ಸಿಎಂ ಏಕ್ ನಾಥ್ ಶಿಂಧೆ ಅವರ ಭೇಟಿಯಲ್ಲಿ ಭಾಗಿಯಾಗಲಿದ್ದಾರೆ.

ಭಾನುವಾರ, ಫಡ್ನವಿಸ್ ರಾಮಜನ್ಮ ಭೂಮಿ ಸರಯೂ ನದಿಯ ದಡದಲ್ಲಿ ಮಹಾ ಆರತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹೊಸದಾಗಿ ನಿರ್ಮಿಸಲಾದ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಸಿಎಂ ಏಕ್ ನಾಥ್ ಶಿಂಧೆ ಅವರು ಹನುಮಾನ್ ಗರ್ಹಿ ದೇವಸ್ಥಾನ ಮತ್ತು ರಾಮಮಂದಿರದಲ್ಲಿ ಭಾನುವಾರ ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ. ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ತೀರ್ಪಿನ ಒಂದು ವರ್ಷದ ಮೊದಲು, 2020 ರಲ್ಲಿ ಏಕನಾಥ್ ಶಿಂಧೆ ಅಯೋಧ್ಯೆಗೆ ಭೇಟಿ ನೀಡಿದ್ದರು.

ಶನಿವಾರ ಅಯೋಧ್ಯೆ ಭೇಟಿ ನೀಡಿದ ಭಾಗವಾಗಿ ಲಖನೌಗೆ ಆಗಮಿಸಿದ ಸಿಎಂ ಏಕ್ ನಾಥ್ ಶಿಂಧೆ ಅವರನ್ನು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸ್ವಾಗತಿಸಿದರು. ಇದು ರಾಜಕೀಯ ಭೇಟಿಯಲ್ಲ, ನಾನು ಈ ಹಿಂದೆ ಅಯೋಧ್ಯೆಗೆ ಭೇಟಿ ನೀಡಿದ್ದೆ, ಆದರೆ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಬರುತ್ತಿದ್ದೇನೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!