ಆಂಧ್ರ ಪ್ರದೇಶದಲ್ಲಿ ಅಪರೂಪದ ಲೋಹ ನಿಕ್ಷೇಪ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ 15 ಅಪರೂಪದ ಲೋಹ (Rare earth elements) ನಿಕ್ಷೇಪಗಳು ಪತ್ತೆಯಾಗಿವೆ. ಹೈದರಾಬಾದ್ ಮೂಲದ ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಈ ಲೋಹ ನಿಕ್ಷೇಪಗಳನ್ನು ಕಂಡು ಹಿಡಿದಿದೆ.

ಲ್ಯಾಂಥನೈಡ್ ಸರಣಿಯ ಈ ಅಪರೂಪದ ಲೋಹಗಳು ಸೆಲ್‌ಫೋನ್‌ಗಳು, ಟೆಲಿವಿಷನ್‌ಗಳು, ಕಂಪ್ಯೂಟರ್‌ಗಳು ಮತ್ತು ಆಟೋಮೊಬೈಲ್‌ಗಳಂತಹ ಅನೇಕ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ದಿನನಿತ್ಯದ ಮತ್ತು ವಿವಿಧ ಕೈಗಾರಿಕಾ ಅನ್ವಯಿಕೆಗಳಲ್ಲಿ ನಿರ್ಣಾಯಕ ಪಾತ್ರ ಹೊಂದಿವೆ.

ಪ್ರಸ್ತು ಕಂಡುಹಿಡಿಯಲ್ಪಟ್ಟ ಲೋಹ ನಿಕ್ಷೇಪಗಳಲ್ಲಿ ಅಲನೈಟ್, ಸೆರಿಯೇಟ್, ಥೋರೈಟ್, ಕೊಲಂಬೈಟ್, ಟ್ಯಾಂಟಲೈಟ್, ಅಪಟೈಟ್, ಜಿರ್ಕಾನ್, ಮೊನಾಜೈಟ್, ಪೈರೋಕ್ಲೋರ್ ಯುಕ್ಸೆನೈಟ್ ಮತ್ತು ಫ್ಲೋರೈಟ್ ಗಳು ಸೇರಿವೆ.

ಈ ಅಂಶಗಳನ್ನು ಕ್ಲೀನ್ ಎನರ್ಜಿ, ಏರೋಸ್ಪೇಸ್, ​​ಡಿಫೆನ್ಸ್ ಮತ್ತು ಉತ್ಪಾದನೆಯಲ್ಲಿ ಬಳಸಲಾಗುತ್ತದೆ. ಇವು ಆಧುನಿಕ ಎಲೆಕ್ಟ್ರಾನಿಕ್ಸ್‌ನ ಪ್ರಮುಖ ಅಂಶಗಳೆಂದು ಪರಿಗಣಿಸಲ್ಪಟ್ಟಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!