ನಟ ಸಲ್ಮಾನ್ ಖಾನ್ ಮನೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಭೇಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಅವರು ಇಂದು ನಟ ಸಲ್ಮಾನ್ ಖಾನ್ (Salman Khan) ಅವರನ್ನು ಭೇಟಿಯಾಗಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಮುಂಬೈನ ಬಾಂದ್ರಾದಲ್ಲಿರುವ ನಟನ ಮನೆಯ ಹೊರಗೆ ಗುಂಡಿನ ದಾಳಿ ನಡೆಸಲಾಗಿತ್ತು. ಇದೀಗ ಇಂದು ನಟನ ಮನೆಗೆ ಭೇಟಿ ನೀಡಿ ಈ ಕುರಿತು ಚರ್ಚಿಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿಂಧೆ, ಸರ್ಕಾರ ನಿಮ್ಮೊಂದಿಗಿದೆ ಎಂದು ನಾನು ಸಲ್ಮಾನ್ ಖಾನ್‌ಗೆ ಹೇಳಿದ್ದೇನೆ. ಗುಂಡಿನ ದಾಳಿ ಸಂಬಂಧ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪ್ರಕರಣದ ಮೂಲವನ್ನು ಹುಡುಕುತ್ತಿದ್ದು, ಯಾರನ್ನೂ ಬಿಡಲ್ಲ. ಯಾರೂ ಈ ರೀತಿ ಟಾರ್ಗೆಟ್ ಮಾಡಬಾರದು ಎಂದು ಹೇಳಿದರು.

ಯಾವುದೇ ಗ್ಯಾಂಗ್ ಅಥವಾ ಗ್ಯಾಂಗ್ ವಾರ್‌ಗೆ ಅವಕಾಶ ನೀಡುವುದಿಲ್ಲ. ಇನ್ಮುಂದೆ ಈ ರೀತಿಯ ಘಟನೆಗಳು ಸಂಭವಿಸಲು ನಾವು ಬಿಡುವುದಿಲ್ಲ. (ಲಾರೆನ್ಸ್) ಬಿಷ್ಣೋಯ್ (Lawrence Bishnoi) ಗ್ಯಾಂಗ್‌ ನನ್ನು ಮುಗಿಸುತ್ತೇವೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಮುಖ್ಯಮಂತ್ರಿಗಳು ಘಟನೆ ನಡೆದ ದಿನವೇ ನಟನೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದರು. ಮುಂಬೈ ಪೊಲೀಸ್ ಕಮಿಷನರ್ ಜೊತೆಯೂ ಮಾತನಾಡಿದ್ದು, ನಟನ ಭದ್ರತೆ ಹೆಚ್ಚಿಸುವಂತೆ ಸೂಚಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!