ಛತ್ತೀಸ್‍ಗಢದಲ್ಲಿ ಸೇನಾಪಡೆಯ ಬೇಟೆ: ಕಮಾಂಡರ್‌ ಸೇರಿ 18 ನಕ್ಸಲರ ಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಛತ್ತೀಸ್‍ಗಢದ (Chhattisgarh) ಕಂಕೇರ್ ಜಿಲ್ಲೆಯಲ್ಲಿ ಭದ್ರತಾಪಡೆ (Border Security Force) ಹಾಗೂ ಮಾವೋವಾದಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ ನಕ್ಸಲರ ಹತ್ಯೆಯಾಗಿದೆ.

ಈ ಎನ್‌ಕೌಂಟರ್‌ನಲ್ಲಿ ನಕ್ಸಲೀಯ ಕಮಾಂಡರ್ ಶಂಕರ್ ರಾವ್ ಕೂಡ ಹತರಾಗಿದ್ದಾರೆ, ಇದುವರೆಗೆ 18 ಮೃತದೇಹಗಳು ಪತ್ತೆಯಾಗಿದ್ದು, ಅಪಾರ ಸಂಖ್ಯೆಯ ಸ್ವಯಂಚಾಲಿತ ರೈಫಲ್‌ಗಳು ಪತ್ತೆಯಾಗಿವೆ. ಮಾಹಿತಿ ಪ್ರಕಾರ, ಈ ಎನ್‌ಕೌಂಟರ್‌ನಲ್ಲಿ 3 ಪೊಲೀಸರು ಗಾಯಗೊಂಡಿದ್ದಾರೆ.

ಎನ್‌ಕೌಂಟರ್‌ನಲ್ಲಿ 18 ನಕ್ಸಲೀಯರು ಹತರಾಗಿದ್ದಾರೆ ಎಂದು ಎಸ್‌ಪಿ ಕಲ್ಯಾಣ್ ಅಲಿಸೆಲಾ ಖಚಿತಪಡಿಸಿದ್ದಾರೆ. ಟಾಪ್ ನಕ್ಸಲೈಟ್ ಕಮಾಂಡರ್ ಶಂಕರ್ ರಾವ್ ಕೂಡ ಹತರಾಗಿದ್ದಾರೆ ಎಂದು ತಿಳಿಸಿದ್ದು, ಶಂಕರ್‌ ರಾವ್‌ನ ತಲೆಗೆ 25 ಲಕ್ಷ ರೂಪಾಯಿ ಬಹುಮಾನವನ್ನು ಸರ್ಕಾರ ನಿಗದಿ ಮಾಡಿತ್ತು. 7 ಎಕೆ 47 ರೈಫಲ್‌ಗಳ ಜೊತೆಗೆ 1 ಐಎನ್‌ಎಸ್‌ಎಎಸ್ ರೈಫಲ್ ಮತ್ತು 3 ಎಲ್‌ಎಂಜಿ ಕೂಡ ವಶಪಡಿಸಿಕೊಳ್ಳಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಒಬ್ಬ ಬಿಎಸ್‌ಎಸ್‌ ಸಿಬ್ಬಂದಿ ಕಾಲಿಗೆ ಗುಂಡು ತಗುಲಿದೆ. ಅವರು ಅಪಾಯದಿಂದ ಪಾರಾಗಿದ್ದು, ಇನ್ನೂ ಇಬ್ಬರು ಗಾಯಗೊಂಡಿದ್ದಾರೆ. ಈ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!