Monday, October 2, 2023

Latest Posts

ಮಹಾರಾಷ್ಟ್ರ ಕಾಂಗ್ರೆಸ್ ಸಂಸದ ಬಾಲು ಧನೋರ್ಕರ್ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಹಾರಾಷ್ಟ್ರ ಕಾಂಗ್ರೆಸ್ ಪಕ್ಷದ ಏಕೈಕ ಲೋಕಸಭಾ ಸದಸ್ಯ ಬಾಲು ಧನೋರ್ಕರ್ ಮಂಗಳವಾರ ಮುಂಜಾನೆ ನಿಧನರಾದರು. ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ. ಅವರ ಪತ್ನಿ ಪ್ರತಿಭಾ ಧನೋರ್ಕರ್ ವರೋರಾ-ಭದ್ರಾವತಿ ವಿಧಾನಸಭೆಯಿಂದ ಶಾಸಕರಾಗಿದ್ದು, ಇಬ್ಬರು ಗಂಡು ಮಕ್ಕಳಿದ್ದಾರೆ. ಬಾಲು ಧನೋರ್ಕರ್ ಅವರ ತಂದೆ ನಾರಾಯಣ್ ಅವರು ಶನಿವಾರ ಅನಾರೋಗ್ಯದಿಂದ ನಾಗ್ಪುರದಲ್ಲಿ ನಿಧನರಾದರು. ಅವರ ಅಂತ್ಯಕ್ರಿಯೆ ಭಾನುವಾರ ನಡೆಯಿತು. ಆ ಸಮಯದಲ್ಲಿ ಬಾಲು ಧನೋರ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಿಂದ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ.

ಚಂದ್ರಾಪುರ ಸಂಸದ ಬಾಲು ಧನೋರ್ಕರ್ ಅವರು ಮೂತ್ರಪಿಂಡದ ಕಲ್ಲುಗಳ ಚಿಕಿತ್ಸೆಗಾಗಿ ಮೇ 26 ರಂದು ನಾಗ್ಪುರದ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರ ಆರೋಗ್ಯ ಹದಗೆಟ್ಟಿದ್ದು, ದೆಹಲಿಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಂದಿನಿಂದ ಅವರು ವೆಂಟಿಲೇಟರ್‌ನಲ್ಲಿದ್ದಾರೆ. ಮಂಗಳವಾರ ಮುಂಜಾನೆ ಜಮುನಾ ಕೊನೆಯುಸಿರೆಳೆದರು ಎಂದು ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಅತುಲ್ ಲೋಂಧೆ ತಿಳಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ 1.30ಕ್ಕೆ ಧನೋರ್ಕರ್ ಅವರ ಪಾರ್ಥಿವ ಶರೀರವನ್ನು ದೆಹಲಿಯಿಂದ ನಗರ್‌ಪುರ ವರೋರಾಗೆ ಕೊಂಡೊಯ್ಯಲಾಗುವುದು. ಅಭಿಮಾನಿಗಳು ಮತ್ತು ಸಾರ್ವಜನಿಕರ ಭೇಟಿಗಾಗಿ ಮೇ 31 ರಂದು ಅವರ ನಿವಾಸದಲ್ಲಿ ಇರಿಸಲಾಗುವುದು. ಅವರ ಅಂತ್ಯಕ್ರಿಯೆಯನ್ನು ವಾಣಿ-ವರೋರಾ ಬೈಪಾಸ್ ರಸ್ತೆಯಲ್ಲಿರುವ ಮೋಕ್ಷಧಾಮದಲ್ಲಿ ಬೆಳಿಗ್ಗೆ 11 ಗಂಟೆಯ ನಂತರ ನೆರವೇರಿಸಲಾಗುವುದು.

ಬಾಲು ಧನೋರ್ಕರ್ ಅವರು 4 ಮೇ 1975 ರಂದು ಯವತ್ಮಾಲ್ ಜಿಲ್ಲೆಯಲ್ಲಿ ಜನಿಸಿದರು. ಅವರ ರಾಜಕೀಯ ಜೀವನ ಆರಂಭವಾದದ್ದು ಶಿವಸೇನೆಯಿಂದ. 2009 ರಲ್ಲಿ, ಅವರು ಶಿವಸೇನೆಯಿಂದ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು. 2014 ರಲ್ಲಿ ಭದ್ರಾವತಿ ವರೋರಾದಿಂದ ಶಿವಸೇನೆ ಶಾಸಕರಾದರು. ಅದರ ನಂತರ, ಅವರು 2019 ರಲ್ಲಿ ಶಿವಸೇನೆಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ಕಳೆದ ಚುನಾವಣೆಯಲ್ಲಿ ಚಂದ್ರಾಪುರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಗೆದ್ದಿದ್ದರು. ಬಾಲು ಧನೋರ್ಕರ್ ಮಹಾರಾಷ್ಟ್ರದ ಏಕೈಕ ಕಾಂಗ್ರೆಸ್ ಸಂಸದ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!