ಮಹಾರಾಷ್ಟ್ರ ಚುನಾವಣೆ: ಬೇಗ ಬೇಗ ಬಂದು ವೋಟ್ ಮಾಡಿ ಎಂದ ಸೆಲೆಬ್ರೆಟಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದ 288 ವಿಧಾಸಭಾ ಕ್ಷೇತ್ರಗಳಿಗೆ ಇಂದು ಮತದಾನ ಶುರುವಾಗಿದೆ. ಎಲ್ಲ ಕಡೆ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ.ಸಾಮಾನ್ಯ ಜನರು ಸಹೈಟ ಸೆಲೆಬ್ರೆಟಿಗಳು ಕೂಡ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ .

ಚುನಾವಣೆಗೆ ಹಲವು ಸೆಲೆಬ್ರೆಟಿಗಳು ಈಗಾಗಲೇ ಮತದಾನ ಮಾಡುವ ಮೂಲಕ ರಾಜ್ಯದ ಜನತೆಗೆ ತಮ್ಮ ಹಕ್ಕನ್ನು ಚಲಾಯಿಸುವಂತೆ ಮನವಿ ಮಾಡಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ದಿ ಲೆಜೆಂಡ್ ಸಚಿನ್ ತೆಂಡೂಲ್ಕರ್​, ಅವರ ಪತ್ನಿ ಅಂಜಲಿ ಹಾಗೂ ಅವರ ಪುತ್ರಿ ಸಾರಾ ಇಂದು ತಮ್ಮ ಬೂತ್​ನಲ್ಲಿ ಮತದಾನ ಮಾಡಿ ಬಂದಿದ್ದಾರೆ.

ಇನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂತ ತಮ್ಮ ಮತವನ್ನು ಚಲಾಯಿಸಿದರು. ಬೆರಳಿನ ಶಾಯಿ ಗುರುತನ್ನು ತೋರಿಸಿದ ಅಕ್ಷಯ್ ಕುಮಾರ್, ಮತದಾನ ಪ್ರಕ್ರಿಯೆ ನಡೆಯುವಲ್ಲಿ ವ್ಯವಸ್ಥೆಯನ್ನು ತುಂಬಾ ಚೆನ್ನಾಗಿ ಮಾಡಲಾಗಿದೆ. ದಯವಿಟ್ಟು ಎಲ್ಲರೂ ಬಂದು ಮತ ಚಲಾಯಿಸಿ ಅದು ತುಂಬಾ ಮುಖ್ಯವಾದದ್ದು ಎಂದಿದ್ದಾರೆ.

ನಟ ಕಾರ್ತಿಕ್ ಆರ್ಯನ್ ಕೂಡ ತಮ್ಮ ವೋಟ್ ಚಲಾಯಿಸಿ ನಾನು ಹೆಮ್ಮೆಯ ಮತದಾರ ಎಂಬ ಬರಹವಿರುವ ಬೋರ್ಡ್​ ಕಡೆ ಕೈ ತೋರಿ ಮತದಾನ ಮಾಡಲು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಇತ್ತ ಟಿನಾ ದತ್ತಾ ಕೂಡ ತಮ್ಮ ಮತವನ್ನು ಚಲಾಯಿಸಿದ್ದಾರೆ.

ಮತ್ತೊಬ್ಬ ಬಾಲಿವುಡ್​ ನಟ ಸೋನು ಸೂದ್ ಕೂಡ ತಮ್ಮ ಮತವನ್ನು ಚಲಾಯಿಸಿದ್ದು. ಇದನ್ನು ರಜೆ ದಿನವೆಂದು ಮಜಾಗಾಗಿ ಬಳಸಬೇಡಿ ದಯವಿಟ್ಟು ಮತಗಟ್ಟೆಗೆ ಹೋಗಿ ಮತ ಚಲಾಯಿಸಿ ಎಂದು ಹೇಳಿದ್ದಾರೆ.

ಟೀನಾ ದತ್ತ, ಬಾಲಿವುಡ್​ ನಟಿ ಉರ್ಮಿಳಾ ಮಾರ್ತೊಂಡೇಕರ್​ ಮೊದಲಾದವರು ಕೂಡ ತಮ್ಮ ಮತವನ್ನು ಚಲಾಯಿಸಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!