ಮಹಾರಾಷ್ಟ್ರ : ನಾಸಿಕ್‌ನಲ್ಲಿ ರೈಲಿಗೆ ಸಿಲುಕಿ ನಾಲ್ವರು ಕಾರ್ಮಿಕರ ಸಾವು !

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ನಾಲ್ವರು ರೈಲ್ವೆ ಕಾರ್ಮಿಕರು ಸಾವನ್ನಪ್ಪಿರುವ ದಾರುಣ ಘಟನೆ ನಾಸಿಕ್‌ನ ಲಾಸಲ್‌ಗಾಂವ್‌ನಲ್ಲಿ ನಡೆದಿದೆ. ಲೈಟ್‌ ರಿಪೇರಿ ಎಂಜಿನ್‌ ತಪ್ಪು ದಿಕ್ಕಿನಲ್ಲಿ ಬಂದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಲಾಸಲ್ ಗಾಂವ್-ಉಗಾವ್ ರೈಲು ನಿಲ್ದಾಣದ ನಡುವೆ ಸೋಮವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಸಾವನ್ನಪ್ಪಿದವರು ಸಂತೋಷ್‌ ಬಾಬುರಾವ್‌ ಕೆದರೆ (38), ದಿನೇಶ್‌ ಸಹದಿ ದರದೆ (35), ಕೃಷ್ಣ ಆತ್ಮರಾಮ್‌ ಅಹಿರೆ (40) ಮತ್ತು ಸಂತೋಷ್‌ ಸುಖದೇವ್‌ ಶಿರಸ್ಥ (38) ಎಂದು ಗರುತಿಸಲಾಗಿದೆ. ನಾಲ್ವರು ರೈಲ್ವೆ ಕಾರ್ಮಿಕರ ಸಾವು ಅವರ ಕುಟುಂಬಕ್ಕೆ ದುಃಖ ತಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!