ಕರ್ನಾಟಕದ ಅತಿ ದೊಡ್ಡ ಥಿಯೇಟರ್ ಈಗ ಮಹೇಶ್ ಬಾಬು ಸ್ವಂತ: ಶೀಘ್ರದಲ್ಲೇ ಬೆಂಗಳೂರಿನಲ್ಲಿ AMB ಸಿನಿಮಾಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಟ ಮಹೇಶ್ ಬಾಬು ಚಲನಚಿತ್ರಗಳ ಜೊತೆಗೆ ಜಾಹೀರಾತುಗಳು, ಖಾಸಗಿ ವ್ಯವಹಾರಗಳಲ್ಲಿಯೂ ಬಹಣ ಸಕ್ರಿಯರಾಗಿ ಕೆಲಸ ಮಾಡುತ್ತಾರೆ. ಮಹೇಶ್ ಮಲ್ಟಿಪ್ಲೆಕ್ಸ್ ಥಿಯೇಟರ್ ಉದ್ಯಮಕ್ಕೂ ಕಾಲಿಟ್ಟು, ಏಷ್ಯನ್ ಸಿನಿಮಾಸ್ ಸಹಯೋಗದಲ್ಲಿ AMB ಸಿನಿಮಾಸ್ ಮಲ್ಟಿಪ್ಲೆಕ್ಸ್ ನಿರ್ಮಿಸಿದೆ. ಪ್ರಸ್ತುತ, ಎಎಮ್‌ಬಿ ಸಿನಿಮಾಸ್ ಸಂಪೂರ್ಣ ಲಾಭದೊಂದಿಗೆ ಯಶಸ್ವಿಯಾಗಿ ಓಡುತ್ತಿದ್ದರೂ ಇದೀಗ ಮಹೇಶ್ ಬೆಂಗಳೂರಿನಲ್ಲಿ ಮತ್ತೊಂದು ಎಎಂಬಿ ಮಲ್ಟಿಪ್ಲೆಕ್ಸ್ ತೆರೆಯಲು ಸಿದ್ದರಾಗಿದ್ದಾರೆ.

ಹಲವು ವರ್ಷಗಳಿಂದ ಟಾಲಿವುಡ್ ನಲ್ಲಿ ಆಳ್ವಿಕೆ ನಡೆಸಿರುವ ಮಹೇಶ್ ಸದ್ಯದಲ್ಲೇ ತಮ್ಮ ಬ್ಯುಸಿನೆಸ್‌ ಅನ್ನು ಕನ್ನಡ ಇಂಡಸ್ಟ್ರಿಗೂ ಪಸರಿಸಲಿದ್ದಾರೆ. ಬೆಂಗಳೂರಿನ ಗಾಂಧಿನಗರದಲ್ಲಿದ್ದ ಕಪಾಲಿ ಥಿಯೇಟರ್ ಕರ್ನಾಟಕದ ಅತಿ ದೊಡ್ಡ ಥಿಯೇಟರ್ ಎಂಬ ಕ್ಯಾತಿ ಪಡೆದಿತ್ತು. ಇದೀಗ ಈ ಥಿಯೇಟರ್‌ ಜಾಗದಲ್ಲಿ ಎಎಂಬಿ ತಲೆಎತ್ತಲಿದೆ.

1968 ರಲ್ಲಿ ಅಂದಿನ ಕೇಂದ್ರ ಹಣಕಾಸು ಸಚಿವರಾಗಿದ್ದ ಮೊರಾರ್ಜಿ ದೇಸಾಯಿ ಅವರು ಕಪಾಲಿ ಚಿತ್ರಮಂದಿರವನ್ನು ಉದ್ಘಾಟಿಸಿದ್ದರು. ಕಪಾಲಿ ಚಿತ್ರಮಂದಿರ ಜಗತ್ತಿನ 3ನೇ ಅತಿ ದೊಡ್ಡ ಏಷ್ಯಾದಲ್ಲೇ ಮೊದಲ ಏಕ ಸ್ಕ್ರೀನ್ ಬಹುದೊಡ್ಡ ಚಿತ್ರ ಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆರಂಭದಲ್ಲಿ 1465 ಸೀಟುಗಳನ್ನು ಹೊಂದಿದ್ದ ಈ ಥಿಯೇಟರ್ ನಂತರ ಅದನ್ನು 1100 ಸೀಟ್‌ಗಳಿಗೆ ಇಳಿಸಲಾಯಿತು.

ಕ್ರಮೇಣ ನಷ್ಟದಿಂದಾಗಿ, ಈ ಚಿತ್ರಮಂದಿರವನ್ನು 2017 ರಲ್ಲಿ ಸಂಪೂರ್ಣವಾಗಿ ಮುಚ್ಚಲಾಯಿತು. ಸದ್ಯ ಇಲ್ಲಿ ಮಾಲ್ ನಿರ್ಮಾಣವಾಗುತ್ತಿದೆ. ಮಹೇಶ್ ಬಾಬು ತಮ್ಮ ಎಎಂಬಿ ಸಿನಿಮಾಗಳನ್ನು ಇದರಲ್ಲಿ ಆರಂಭಿಸಲಿದ್ದಾರೆ. ಕನಿಷ್ಠ 6 ಪರದೆ ಇರಲಿದೆ ಎಂದು ವರದಿಯಾಗಿದೆ. ಅಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವಾಗಲೇ ಎಎಂಬಿ ಸಿನಿಮಾಸ್ ಬರಲಿದೆ ಎಂದು ಬೋರ್ಡ್ ಕೂಡ ಹಾಕಿದ್ದಾರೆ. ಮಹೇಶ್ ಬಾಬು ಬೆಂಗಳೂರಿನಲ್ಲಿ ನಿರ್ಮಾಣವಾಗಲಿರುವ ಎಎಂಬಿ ಸಿನಿಮಾಸ್ ಆರಂಭಿಸಲು ಅವರೇ ಬರಲಿದ್ದಾರೆ ಎಂಬ ಸುದ್ದಿಯೂ ಓಡಾಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!