ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೀಕರ ರಸ್ತೆ ಅಪಘಾತದಲ್ಲಿ 20 ಮಂದಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ಮೃತರು ಗಣಿ ಕಂಪನಿ ಡಿ ಬೀರ್ಸ್‌ನ ಉದ್ಯೋಗಿಗಳು ಎಂದು ಹೇಳಲಾಗಿದೆ.
ಭಾನುವಾರ ತಡರಾತ್ರಿ ಜಿಂಬಾಬ್ವೆಯ ಗಡಿಯಿಂದ 25 ಕಿಲೋಮೀಟರ್ (15 ಮೈಲುಗಳು) ದೂರದಲ್ಲಿರುವ ಮ್ಯೂಸಿಯನ್ ಗ್ರಾಮದಲ್ಲಿ ಅಪಘಾತ ಸಂಭವಿಸಿದೆ. ಬಸ್‌ನಲ್ಲಿ ದೇಶದ ಅತಿದೊಡ್ಡ ವಜ್ರದ ಗಣಿಗಳಲ್ಲಿ ಒಂದಾದ ವೆನೆಷಿಯಾ ಗಣಿ ಕಾರ್ಮಿಕರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ. ಚಲಿಸುತ್ತಿದ್ದ ಬಸ್ ಲಾರಿಗೆ ಡಿಕ್ಕಿ ಹೊಡೆದು, ಪ್ರದೇಶ ರಕ್ತಸಿಕ್ತವಾಗಿತ್ತು.
ವೆನೆಷಿಯಾ ಗಣಿ ಬೋಟ್ಸ್ವಾನ ಮತ್ತು ಜಿಂಬಾಬ್ವೆ ಗಡಿಯ ಸಮೀಪದಲ್ಲಿದೆ. ಇದನ್ನು 30 ವರ್ಷಗಳಿಂದ ಡಿ ಬೀರ್ಸ್ ಗ್ರೂಪ್ ನಡೆಸುತ್ತಿದ್ದು, ಇದು ದೇಶದ ವಾರ್ಷಿಕ ವಜ್ರದ ಉತ್ಪಾದನೆಯ 40 ಪ್ರತಿಶತಕ್ಕಿಂತ ಹೆಚ್ಚಿನದಾಗಿದೆ. ಸ್ಥಳೀಯರು ಸೇರಿದಂತೆ 4,300 ಕ್ಕೂ ಹೆಚ್ಚು ಕಾರ್ಮಿಕರನ್ನು ನೇಮಿಸಿಕೊಂಡಿದೆ.