Tuesday, February 27, 2024

CINE| ʻಆನಿಮಲ್‌ʼಗೆ ಭರ್ಜರಿ ರೆಸ್ಪಾನ್ಸ್, ಪ್ರೀ ರಿಲೀಸ್‌ ಕಾರ್ಯಕ್ರಮಕ್ಕೆ ಟಾಲಿವುಡ್‌ ಸ್ಟಾರ್‌ ನಟ, ನಿರ್ದೇಶಕರು ಭಾಗಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಂದೀಪ್ ವಂಗಾ ನಿರ್ದೇಶನದ, ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಆನಿಮಲ್’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಡಿಸೆಂಬರ್ 1 ರಂದು ಪ್ರೇಕ್ಷಕರ ಮುಂದೆ ಬರಲಿರುವ ಈ ಅಂಡರ್ ವರ್ಲ್ಡ್ ಡಾನ್ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಭಾರೀ ನಿರೀಕ್ಷೆ ಮೂಡಿಸಿದೆ.

Animal' pre-release event: Mahesh Babu and SS Rajamouli join Sandeep Reddy Vanga, Ranbir Kapoor, Anil Kapoor, and Rashmika Mandanna in Hyderabad - See photos | Telugu Movie News - Times of India

ಈ ಚಿತ್ರದ ಪ್ರಚಾರದ ಭಾಗವಾಗಿ ನಿನ್ನೆ ಸಂಜೆ ಹೈದರಾಬಾದ್‌ನಲ್ಲಿ ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಚಿತ್ರತಂಡ ಮಾತ್ರವಲ್ಲದೆ ಟಾಲಿವುಡ್‌ ಸ್ಟಾರ್‌ ನಟ ಮಹೇಶ್‌ ಬಾಬು ಹಾಗೂ ನಿರ್ದೇಶಕ ರಾಜಮೌಳಿ ಕೂಡ ಹಾಜರಿದ್ದರು.

Animal pre-release event: Ranbir Kapoor chants 'Jai Babu'; Anil Kapoor gives speech in Telugu

ವೇದಿಕೆಯಲ್ಲಿ ಪೋಕಿರಿ ಚಿತ್ರದ ಹಾಡು ಮೂಡಿಬಂದಿತು. ಆ ಹಾಡಿನ ಮಹೇಶ್ ಬಾಬು, ಅನಿಲ್ ಕಪೂರ್, ಬಾಬಿ ಡಿಯೋಲ್, ರಣಬೀರ್ ಕೂಡ ಹೆಜ್ಜೆ ಹಾಕಿದರು. ಈ ಹಿಂದೆ ‘ಸರ್ಕಾರು ವಾರಿ ಪಾಟ’ ಸಿನಿಮಾದ ಸಕ್ಸಸ್ ಸಮಾರಂಭದಲ್ಲಿ ಮಹೇಶ್ ಡ್ಯಾನ್ಸ್ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಮತ್ತೆ ಈ ರೀತಿ ವೇದಿಕೆ ಮೇಲೆ ಕುಣಿದು ಕುಪ್ಪಳಿಸಿ ಅಭಿಮಾನಿಗಳನ್ನು ಹುರಿದುಂಬಿಸಿದರು. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗುತ್ತಿವೆ.

Mahesh Babu and Anil Kapoor Dance On Stage | Super Fun | ANIMAL Movie Pre Release Event | Ranbir - YouTube

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!