VIRAL | ವಿರಾಟ್ ಕೊಹ್ಲಿಗೆ ಏನಾಯ್ತು? ಗಾಯಗೊಂಡ ಕೊಹ್ಲಿ ಫೋಟೊ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಊದಿಕೊಂಡ ಕಣ್ಣುಗಳು, ಹಣೆ ಹಾಗೂ ಕೆನ್ನೆ ಮೇಲೆ ಗಾಯ, ಮೂಗಿನ ಮೇಲೆ ಪ್ಲಾಸ್ಟರ್ ಇಷ್ಟೆಲ್ಲಾ ನೋವಿದ್ರೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮುಖದ ಮೇಲೆ ಭರವಸೆಯ ನಗುವೊಂದು ಕಾಣಿಸುತ್ತಿದೆ..

ಹೌದು, ಈ ಫೋಟೊವನ್ನು ವಿರಾಟ್ ಕೊಹ್ಲಿ ಶೇರ್ ಮಾಡಿದ್ದು, ಇದೇನಿದು ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ನೋಡಿದ ಕೂಡಲೇ ನಿಜ ಇರಬಹುದು ಎನಿಸಿದರೂ ಇದು ಎಡಿಟಿಂಗ್ ಎಂದು ಫೋಟೊ ನೋಡಿದರೆ ಗೊತ್ತಾಗುವಂತಿದೆ.

ಎನ್ನುವ ಕ್ಯಾಪ್ಷನ್‌ನ್ನು ಕೊಹ್ಲಿ ಹಾಕಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೊ ಭಾರೀ ವೈರಲ್ ಆಗಿದೆ. ಕೆಲವರು ಇನ್ನೇನು ಐಪಿಎಲ್ ಆರಂಭವಾಗಲಿದೆ ಅದಕ್ಕಾಗಿ ಪ್ರಚಾರ ಎಂದು ಹೇಳುತ್ತಿದ್ದಾರೆ.

ಇಷ್ಟು ವರ್ಷದ ಸೋಲುಗಳಿಂದ ಜರ್ಜರಿತವಾದರೂ ಭರವಸೆ ಮುಗಿದಿಲ್ಲ ಎನ್ನುವ ಅರ್ಥ ಇದಾಗಿರಬಹುದು, ಅಥವಾ ವಿಶ್ವಕಪ್‌ನಲ್ಲಿ ಸೋಲುಂಡು ಗಾಯಗೊಂಡಿದ್ದರೂ ನಗುತ್ತಾ ಐಪಿಎಲ್ ಕಡೆ ಮುನ್ನುಗ್ಗುತ್ತಿದ್ದೇವೆ ಎನ್ನುವ ಅರ್ಥವೂ ಇದಾಗಿರಬಹುದು.

ಇದರ ನಿಜವಾದ ಅರ್ಥವೇನು? ಕಿಂಗ್ ಕೊಹ್ಲಿ ಹೇಳಬೇಕಷ್ಟೆ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!