ಟಾಲಿವುಡ್‌ ನಟ ಮಹೇಶ್‌ ಬಾಬುಗೆ ಮಾತೃ ವಿಯೋಗ: ಅನಾರೋಗ್ಯದಿಂದ ಕೊನೆಯುಸಿರೆಳೆದ ಇಂದಿರಾದೇವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

‘ಸೂಪರ್ ಸ್ಟಾರ್’ ಕೃಷ್ಣ ಅವರ ಪತ್ನಿ, ಮಹೇಶ್ ಬಾಬು ಅವರ ತಾಯಿ ಇಂದಿರಾದೇವಿ (70) ಅನಾರೋಗ್ಯದಿಂದ ನಿಧನರಾದರು. ಫಿಲಂ ನಗರದ ಪದ್ಮಾಲಯ ಸ್ಟುಡಿಯೋ ಬಳಿಯಿರುವ ನಿವಾಸದಲ್ಲಿ ಇಂದಿರಾದೇವಿ ಬುಧವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಇಂದಿರಾ ದೇವಿ ಅವರು ‘ಸೂಪರ್ ಸ್ಟಾರ್’ ಕೃಷ್ಣ ಅವರ ಮೊದಲ ಪತ್ನಿ. ಇವರಿಗೆ ಐವರು ಮಕ್ಕಳು, ರಮೇಶ್ ಬಾಬು, ಮಹೇಶ್ ಬಾಬು, ಪದ್ಮಾವತಿ, ಮಂಜುಳಾ ಮತ್ತು ಪ್ರಿಯದರ್ಶಿನಿ. ರಮೇಶ್ ಬಾಬು ಕೂಡಾ ಕೆಲ ದಿನಗಳ ಹಿಂದೆ ನಿಧನರಾದರು.

ಇಂದಿರಾ ದೇವಿ ನಿಧನದಿಂದ ಮಹೇಶ್‌ ಬಾಬು ಮನೆಯಲ್ಲಿ ದುಃಖದ ಛಾಯೆ ಆವರಿಸಿದೆ. ಮಹೇಶ್‌ ಬಾಬು, ಕೃಷ್ಣ ಅವರ ಅಭಿಮಾನಿಗಳು, ಸಿನಿರಂಗ ಸಂತಾಪ ಸೂಚಿಸುತ್ತಿದ್ದಾರೆ. ಮಹೇಶ್ ಬಾಬು ಅಭಿಮಾನಿಗಳು ಪ್ರಿನ್ಸ್ ತಮ್ಮ ತಾಯಿಯ ಬಗ್ಗೆ ಆಡಿದ ಮಾತುಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಆ ವಿಡಿಯೋದಲ್ಲಿ ತಾನು ತನ್ನ ತಾಯಿಯನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ಪ್ರತಿ ಚಿತ್ರ ಬಿಡುಗಡೆಯ ಮುನ್ನಾದಿನದಂದು ಅವರ ಕೈಯಿಂದ ಕೊಡುವ ಅಮೃತದಂತೆ ಇರುತ್ತದೆ. ಆ ಕಾಫಿ ಕುಡಿದರೆ ದೇವರಿಂದ ಪ್ರಸಾದ ತೆಗೆದುಕೊಂಡಂತೆ ಅನಿಸುತ್ತದೆ ಎಂದಿರುವ ವಿಡಿಯೋ ವೈರಲ್‌ ಆಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!