ಪೋಕಿರಿ ವರ್ಲ್ಡ್ ವೈಡ್ ರೀ ರಿಲೀಸ್: 16 ವರ್ಷ ಕಳೆದರೂ ಕಡಿಮೆಯಾಗದ ಕ್ರೇಜ್, ಟಿಕೆಟ್‌ಗಳು ಸೋಲ್ಡ್‌ಔಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಪೂರಿಜಗನ್ನಾಥ್ ನಿರ್ದೇಶನದ ʻಪೋಕಿರಿʼ ಚಿತ್ರ ಭರ್ಜರಿ ಯಶಸ್ಸು ಕಂಡಿದ್ದು ಗೊತ್ತೇ ಇದೆ. ಇದು ಮಹೇಶ್ ಬಾಬು ವೃತ್ತಿಜೀವನದಲ್ಲಿ ದೊಡ್ಡ ಹಿಟ್ ಚಿತ್ರ ಮತ್ತು ಸೂಪರ್ ಸ್ಟಾರ್ ಗಿರಿ ತಂದುಕೊಟ್ಟಿತ್ತು. ಅಂದು 80 ಕೋಟಿ ಕಲೆಕ್ಷನ್ ಮಾಡಿ ಇಂಡಸ್ಟ್ರಿ ಹಿಟ್ ಆಗಿ ಮರೆಯಲಾಗದ ಸಿನಿಮಾ ಆಗಿದೆ.

ಇದೀಗ ಆಗಸ್ಟ್ 9 ರಂದು ಮಹೇಶ್ ಬಾಬು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪೋಕಿರಿ ಚಿತ್ರ ಮರು ಬಿಡುಗಡೆಯಾಗಲಿದೆ. ಪೋಕಿರಿ ಚಲನಚಿತ್ರವನ್ನು 4K ಗುಣಮಟ್ಟದಲ್ಲಿ ಮರುರೂಪಿಸಿ ಮತ್ತೊಮ್ಮೆ ರಿಲೀಸ್ ಮಾಡಲಾಗುತ್ತಿದೆ. ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲದೆ, ಬೇರೆ ರಾಜ್ಯಗಳಲ್ಲಿ, ತೆಲುಗು ಜನರಿರುವ ಬೇರೆ ದೇಶಗಳಲ್ಲಿಯೂ ಪೋಕಿರಿ ಸಿನಿಮಾ ಬಿಡುಗಡೆಯಾಗುತ್ತಿದೆ. ಈಗಾಗಲೇ ಮುಂಗಡ ಬುಕ್ಕಿಂಗ್ ಮಾಡಲಾಗಿದ್ದು, ಎಲ್ಲಾ ಟಿಕೆಟ್‌ಗಳು ಸೋಲ್ಡ್‌ ಔಟ್‌ ಆಗಿವೆ.

ತೆಲುಗು ರಾಜ್ಯಗಳಲ್ಲಿ ಎಪಿಯಲ್ಲಿ 60 ಚಿತ್ರಮಂದಿರಗಳಲ್ಲಿ, ತೆಲಂಗಾಣದಲ್ಲಿ 42 ಥಿಯೇಟರ್‌ಗಳಲ್ಲಿ ಮತ್ತು ದೇಶದ ಇತರ ರಾಜ್ಯಗಳಲ್ಲಿ 33 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗುತ್ತಿದೆ. ಅಮೆರಿಕ, ಆಸ್ಟ್ರೇಲಿಯಾ ಮುಂತಾದ ತೆಲುಗು ಜನ ಇರುವ ದೇಶಗಳಲ್ಲೂ ಬಿಡುಗಡೆಯಾಗುತ್ತಿದೆ. ಈಗಾಗಲೇ ಎಲ್ಲೆಡೆ ಟಿಕೆಟ್ ಬುಕ್ ಆಗಿರುವುದರಿಂದ ಇನ್ನಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಇದರೊಂದಿಗೆ ಮಹೇಶ್ ಅಭಿಮಾನಿಗಳು ಫುಲ್ ಎಕ್ಸೈಟ್ ಆಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!