Friday, March 24, 2023

Latest Posts

125 ಮಕ್ಕಳ ಹಾರ್ಟ್ ಸರ್ಜರಿಗೆ ನೆರವಾಗಲಿದ್ದಾರೆ ಸ್ಟಾರ್ ನಟ ಮಹೇಶ್‌ ಬಾಬು!

 ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಹುಕೋಟಿ ಸಂಭಾವನೆ ಪಡೆಯುವ ಟಾಲಿವುಡ್‌ ನ ಖ್ಯಾತ ನಟ ಮಹೇಶ್‌ ಬಾಬು ಈಗ ಸರ್ಕಾರು ವಾರಿ ಪಾಠ ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ನಡುವೆ ಜನರ ನೆರವಿಗೆ ಬರಲು ಮಹೇಶ್‌ ಮುಂದಾಗಿದ್ದಾರೆ.
ಹಲವು ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಬಂದಿರುವ ಮಹೇಶ್‌ ಬಾಬು ಫೌಂಡೇಶನ್‌ ಈಗ ಮಕ್ಕಳ ಸೇವೆಗೆ ನಿಂತಿದೆ.
ಹೃದಯದ ಸಮಸ್ಯೆಯಿಂದ ಬಳಲುವ ಪುಟ್ಟ ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಸಂಸ್ಥೆ ಮುಂದಾಗಿದೆ. ಮಹೇಶ್​ ಬಾಬು ಅವರು ಹೈದರಾಬಾದ್​ನ ರೇನ್​ಬೋ ಮಕ್ಕಳ ಹಾರ್ಟ್​ ಇನ್ಸ್​ಟಿಟ್ಯೂಟ್​ ಜೊತೆ ಕೈ ಜೋಡಿಸಿದ್ದಾರೆ. ಮಕ್ಕಳೆಂದರೆ ನನಗೆ ಯಾವಾಗಲೂ ಇಷ್ಟ. ಹೃದಯದ ಚಿಕಿತ್ಸೆ ಅಗತ್ಯ ಇರುವ ಮಕ್ಕಳಿಗೆ ನೆರವು ನೀಡುತ್ತಿರುವುದಕ್ಕೆ ನನಗೆ ಖುಷಿ ಇದೆ. ಪುಟ್ಟ ಹೃದಯಗಳಿಗೆ ಅತಿ ಹೆಚ್ಚಿನ ಕಾಳಜಿ ಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ಅವರು 125 ಮಕ್ಕಳ ಹಾರ್ಟ್​ ಸರ್ಜರಿಗೆ ನೆರವಾಗಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!