ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಪ್ರಧಾನಿ ಮೋದಿ ಪುಣೆಯ ನೂತನ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದರು.
ಇಂದು ಬೆಳಗ್ಗೆ 11:30ಕ್ಕೆ ಪುಣೆ ಮೆಟ್ರೋ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ, ಕೆಲ ವಿದ್ಯಾರ್ಥಿಗಳೊಂದಿಗೆ ಆನಂದನಗರ ಮೆಟ್ರೋ ನಿಲ್ದಾಣದಿಂದ ಪ್ರಯಾಣಿಸಿದರು.
ಇದು ಒಟ್ಟು 32.2 ಕಿ.ಮೀ. ಪುಣೆ ಮೆಟ್ರೋ ರೈಲು ಯೋಜನೆಯಲ್ಲಿದ್ದು, 12 ಕಿ.ಮೀ. ಮಾರ್ಗದ ಮೆಟ್ರೋಗೆ ಪ್ರಧಾನಿ ಚಾಲನೆ ನೀಡಿದರು. ಈ ಮೆಟ್ರೋ ರೈಲು ಮಾರ್ಗ ಅಂದಾಜು 11,400 ಕೋಟಿ ರೂ. ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈ ಮೆಟ್ರೋ ಯೋಜನೆಯಲ್ಲಿ ವಿಶ್ವ ದರ್ಜೆಯ ಮೂಲ ಸೌಕರ್ಯಗಳನ್ನು ಒದಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಪುಣೆಗೆ ಆಗಮಿಸಿರುವ ಪ್ರಧಾನಿ ಮೋದಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಪುಣೆಯ ಮಹಾನಗರ ಪಾಲಿಕೆಯಲ್ಲಿ ಸ್ಥಾಪಿಸಲಾಗಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಪ್ರಧಾನಿ ಮೋದಿ ಅನಾವರಣಗೊಳಿಸಲಿದ್ದಾರೆ.
ಪ್ರಧಾನಿ ಮೋದಿ ಅವರು ಇಂದು ಪುಣೆ ಮಹಾನಗರ ಪಾಲಿಕೆಯಲ್ಲಿ ಸ್ಥಾಪಿಸಲಾಗಿರುವ 9.5 ಅಡಿ ಎತ್ತರದ 1850 ಕೆ.ಜಿ. ತೂಕದ ಲೋಹದ ಛತ್ರಿಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ.
On landing in Pune, PM @narendramodi unveiled a statue of Chhatrapati Shivaji Maharaj. pic.twitter.com/0zKyhORNRI
— PMO India (@PMOIndia) March 6, 2022