Thursday, August 18, 2022

Latest Posts

ಬಿಜೆಪಿ ಅಭ್ಯರ್ಥಿಯಾಗಿ ಮಹೇಶ್ ವಳಕ್ಕುಂಜ ನಾಮಪತ್ರ ಸಲ್ಲಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬದಿಯಡ್ಕ ಗ್ರಾಮ ಪಂಚಾಯಿತಿಯ 14ನೇ ವಾರ್ಡು ಪಟ್ಟಾಜೆ ಉಪಚುನಾವಣೆಗೆ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿ ಮಹೇಶ್ ವಳಕ್ಕುಂಜ ಶನಿವಾರ ಉಪಚುನಾವಣಾಧಿಕಾರಿ ಗ್ರಾಮಪಂಚಾಯಿತಿ ಕಾರ್ಯದರ್ಶಿ ರಾಜೇಂದ್ರನ್ ಅವರಿಗೆ ಪಕ್ಷದ ಮುಖಂಡರೊಂದಿಗೆ ತೆರಳಿ ನಾಮಪತ್ರಿಕೆಯನ್ನು ಸಲ್ಲಿಸಿದರು.

ಪಕ್ಷದ ಬದಿಯಡ್ಕ ಮಂಡಲ ಕಚೇರಿಯಲ್ಲಿ ನಡೆದ ಸಭೆಯ ನಂತರ ಪಕ್ಷದ ನೇತಾರರು ಹಾಗೂ ಕಾರ್ಯಕರ್ತರೊಂದಿಗೆ ಗ್ರಾಮಪಂಚಾಯಿತಿಗೆ ತೆರಳಲಾಯಿತು. ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಕೆ.ಶ್ರೀಕಾಂತ್, ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಮಹಿಳಾ ಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆ ಅಶ್ವಿನಿ ಎಂ.ಎಲ್, ವಿಜಯಕುಮಾರ್ ರೈ, ಎಂ. ಸುಧಾಮ ಗೋಸಾಡ, ಹರೀಶ್ ನಾರಂಪಾಡಿ, ಸಂಪತ್ ಕುಮಾರ್, ರಕ್ಷಿತ್ ಕೆದಿಲಾಯ, ಶ್ರೀಧರ ಬೆಳ್ಳೂರು, ನ್ಯಾಯವಾದಿ ಗೋಪಾಲಕೃಷ್ಣ ಭಟ್, ಜನನಿ, ಪುಷ್ಪಾ ಗೋಪಾಲ, ವೆಂಕಪ್ಪ ನಾಯ್ಕ, ಚುನಾವಣಾ ಉಸ್ತುವಾರಿ ಸುನಿಲ್ ಪಿ.ಆರ್, ಗೋಪಾಲಕೃಷ್ಣ ಎಂ, ಸುಕುಮಾರ ಕುದ್ರೆಪಾಡಿ, ಸೌಮ್ಯ ಮಹೇಶ, ಮಂಜುನಾಥ ಮಾನ್ಯ, ನರೇಂದ್ರ ಬದಿಯಡ್ಕ, ಬಾಲಕೃಷ್ಣ ಶೆಟ್ಟಿ ಕಡಾರು, ರಾಮಪ್ಪ ಮಂಜೇಶ್ವರ ಸಹಿತ ಹಲವು ನೇತಾರರು, ಬಿಜೆಪಿ ಜನಪ್ರತಿನಿಧಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.

ಕಾಂಗ್ರೆಸ್ ಪಕ್ಷದಿಂದ ಐಕ್ಯರಂಗದ ಅಭ್ಯರ್ಥಿಯಾಗಿ ಮಾಜಿ ಗ್ರಾಪಂ ಸದಸ್ಯ ಶ್ಯಾಮಪ್ರಸಾದ ಮಾನ್ಯ, ಎಡರಂಗದಿಂದ ಎಂ.ಮದನ ಈಗಾಗಲೇ ನಾಮಪತ್ರಿಕೆ ಸಲ್ಲಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸಾಯಿರಾಂ ಕೃಷ್ಣ ಭಟ್ ಅವರು 156 ಮತಗಳ ಅಂತರದಿಂದ ಜಯಭೇರಿಯನ್ನು ಬಾರಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!