August 13, 2026
Thursday, August 13, 2026
spot_img

ಬರ್ಥಡೇ ಪಾರ್ಟಿ ಮುಗಿಸಿ ವಾಪಾಸಾಗುವಾಗ ಮಗುಚಿ ಬಿದ್ದ ಮಹೀಂದ್ರ ಥಾರ್‌: ಇಬ್ಬರು ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸ್ನೇಹಿತ ಬರ್ತ್‌ಡೇ ಪಾರ್ಟಿ ಮುಗಿಸಿ ವಾಪಸ್‌ ಬರುತ್ತಿದ್ದ ವೇಳೆ ಮಹೀಂದ್ರಾ ಥಾರ್‌ ಪಲ್ಟಿಯಾಗಿದ್ದು, ಸ್ಥಳದಲ್ಲಿಯೇ ಇಬ್ಬರು ಉಸಿರು ಚೆಲ್ಲಿದ್ದಾರೆ.

ಬೆಂಗಳೂರಿನ ಹೊರವಲಯದ ನೆಲಮಂಗಲದ ಬಳಿ ಇರುವ ಕಂಬಾಳು ಗ್ರಾಮದಲ್ಲಿ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಥಾರ್‌ ಪಲ್ಟಿಯಾಗಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪವನ್‌ ಹಾಗೂ ದೀಪಕ್‌ ಮೃತ ದುರ್ದೈವಿಗಳು. ನಿನ್ನೆ ತಡರಾತ್ರಿ ಸ್ನೇಹಿತನ ಜನ್ಮದಿನದ ಸೆಲಬ್ರೇಷನ್‌ ಮುಗಿಸಿಕೊಂಡು ವಾಪಾಸಾಗುವ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ಥಾರ್‌ ನಾಲ್ಕೈದು ಬಾರಿ ಪಲ್ಟಿಯಾಗಿ ನಂತರ ಗದ್ದೆಗೆ ಬಿದ್ದಿದೆ.

ಸ್ಪೀಡ್‌ನಲ್ಲಿದ್ರಾ ಡ್ರೈವರ್‌?

ಕಾರು ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಕಾರು ಚಾಲಕ ಅತಿಯಾದ ವೇಗದಲ್ಲಿದ್ದ ಎಂದು ಕೆಲ ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ದಾಬಸ್‌ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !