ಯಾವುದೇ ಬೆಲೆ ತೆತ್ತಾದರೂ ಮಹಿಷಾ ದಸರಾ ಮಾಡಲು ಬಿಡುವುದಿಲ್ಲ: ದಿನೇಶ್ ಮೆಂಡನ್

ಹೊಸದಿಗಂತ ವರದಿ, ಉಡುಪಿ:

ರಾಜ್ಯದಲ್ಲೇ ಶಾಂತಿ, ಸುವ್ಯವಸ್ಥೆಗೆ ಹೆಸರುವಾಸಿಯಾದ ಕೃಷ್ಣನಗರಿಯಲ್ಲಿ ಕೆಲವು ಹಿಂದು ವಿರೋಧಿ ಭಾಂದವರು ಮಹಿಷಾ ದಸರಾ ಆಚರಿಸಲು ಸಿದ್ದತೆ ನಡೆಸಿದ್ದಾರೆ. ಆದರೆ ವಿಹಿಂಪ, ಬಜರಂಗದಳ ಯಾವುದೇ ಬೆಲೆ ತೆತ್ತಾದರೂ ಮಹಿಷಾ ದಸರಾ ಮಾಡಲು ಬಿಡುವುದಿಲ್ಲ ಎಂದು ವಿಹಿಂಪ ಪ್ರ.ಕಾರ್ಯದರ್ಶಿ ದಿನೇಶ್ ಮೆಂಡನ್ ಕಿಡಿಕಾರಿದರು.

ಉಡುಪಿಯ ಎಮ್.ಜಿ.ಎಮ್ ಮೈದಾನದಲ್ಲಿ ವಿಹಿಂಪ, ಬಜರಂಗದಳ ಉಡುಪಿ ಜಿಲ್ಲೆ ವತಿಯಿಂದ, ಸ್ವರ್ಗೀಯ ಕೇಶವ ಹೆಗಡೆ ವೇದಿಕೆಯಲ್ಲಿ ನಡೆದ ಹಿಂದು ಸಮಾಜೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಜಿಲ್ಲೆಯಲ್ಲಿರುವ ಬಹು ಸಂಖ್ಯಾತ ಹಿಂದುಗಳು ಈ ಕಾರ್ಯಕ್ರಮದ ಮೂಲಕ ಮಹಿಷಾ ದಸರಾಕ್ಕೆ ವಿರೋಧವನ್ನು ವ್ಯಕ್ತಪಡಿಸಲು ಕೈ ಜೋಡಿಸಬೇಕು. ಇದುವರೆಗೆ ಈ ಜಿಲ್ಲೆಯಲ್ಲಿ ಯಾವುದೇ ಮತದ ಕಾರ್ಯಕ್ರಮಕ್ಕೆ ಹಿಂದುಗಳು ವಿರೋಧಿಸಿಲ್ಲ. ಆದರೆ ಹಿಂದುಗಳ ನಂಬಿಕೆಯನ್ನು ಘಾಸಿಗೊಳಿಸುವ ಕಾರ್ಯಕ್ರಮ ನಡೆಯಲು ಸರಕಾರ, ಜಿಲ್ಲಾಡಳಿತ, ಪೋಲಿಸ್ ಇಲಾಖೆ ಅವಕಾಶ ನೀಡದೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!