ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗ-ಚೆನ್ನೈಗೆ ವಿಮಾನ ಹಾರಾಟಕ್ಕೆ ಮಹೂರ್ತ ಫಿಕ್ಸ್ ಆಗಿದ್ದು, ಇದೇ ಆಗಸ್ಟ್ 15ರಿಂದ ಹಾರಾಟ ಆರಂಭವಾಗಲಿದೆ.
ಆಗಸ್ಟ್ 15ರಿಂದ ಶಿವಮೊಗ್ಗದಿಂದ ಚೆನ್ನೈಗೆ ವಿಮಾನ ಸೇವೆ ಆರಂಭವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದ್ದು, ಇದರೊಂದಿಗೆ ಸ್ಪೈಸ್ ಜೆಟ್ ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಿಗೆ ವಾರಕ್ಕೊಮ್ಮೆ ವಿಮಾನಯಾನ ಸೇವೆ ನಡೆಸಲಿದೆ.
ಚೆನ್ನೈ ವಿಮಾನ ಹಾರಾಟದ ಜೊತೆಗೆ ವಾರದಲ್ಲಿ ಒಂದು ದಿನ ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಿಗೂ ಸ್ಪೈಸ್ ಜೆಟ್ ಹಾರಾಟ ನಡೆಸಲಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಮಧ್ಯ ಕರ್ನಾಟಕದ ಪ್ರಮುಖ ನಿಲ್ದಾಣ ಆಗಿದೆ. ಇಲ್ಲಿ ರಾತ್ರಿ ವೇಳೆ ಇಳಿಯಲು ದೀಪ ಅಳವಡಿಸಲಾಗಿದೆ.