ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ತಮ್ಮ ಡಿವೋರ್ಸ್ ನಂತರ ಇದೇ ಮೊದಲ ಬಾರಿಗೆ ಆಲ್ಬಂ ಹಾಡೊಂದನ್ನು ರಿಲೀಸ್ ಮಾಡಿದ್ದಾರೆ. ಮೈಮಾಟ ಹೆಸರಿನ ಹಾಡು ಇದಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಹವಾ ಸೃಷ್ಟಿಸಿದೆ. ಈ ಹಾಡು ರಿಲೀಸ್ ಆದಾಗಿನಿಂದ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ನಡುವೆ ಮನಸ್ತಾಪ ಇನ್ನಷ್ಟು ಹೆಚ್ಚಾಗಿರುವಂತೆ ಕಾಣಿಸುತ್ತದೆ. ಹಾಡು ರಿಲೀಸ್ ಆದ ಬೆನ್ನಲ್ಲೇ ನನಗಾಗಿ ಬರೆದಿರುವ ಹಾಡೇನೋ ಎನ್ನುವಂತೆ ನಿವೇದಿತಾ ಗೌಡ ಭೂತಕಾಲದ ಭೂತ ನನ್ನನ್ನು ಬಿಡುವಂತೆ ಕಾಣಿಸುತ್ತಿಲ್ಲ ಎಂದು ಪೋಸ್ಟ್ ಮಾಡಿದ್ದರು.
https://www.instagram.com/p/DfCufdxB9am/?dlrf=OGJrb2VrM3RsaXdo
ಇದಕ್ಕೆ ಇಂದು ಚಂದನ್ ಶೆಟ್ಟಿ ಉತ್ತರ ಕೊಟ್ಟಿದ್ದಾರೆ. ನನ್ನ ಹಾಡು ರಿಲೀಸ್ ಆದಾಗಿನಿಂದ ಎಲ್ಲರೂ ಅದು ನನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಹಾಡು ಎಂದು ಲಿಂಕ್ ಮಾಡುತ್ತಿದ್ದೀರಿ. ಇದು ಸರಿಯಲ್ಲ ಎಂದಿದ್ದಾರೆ. ನನ್ನ ಮೈಮಾಟ ಹಾಡಿನ ಆರಂಭದಲ್ಲೇ ತಿಳಿಸಿರುವಂತೆ ಇದು ಕೇವಲ ಮನರಂಜನೆಗಾಗಿ ಮಾಡಿರುವ ಹಾಡಾಗಿದೆ. ಹಾಡಿನ ಮೂಲಕ ಯಾರನ್ನೂ ನೋಯಿಸುವ ಅಥವಾ ಗುರಿಯನ್ನಾಗಿಸುವ ಉದ್ದೇಶ ನನಗಿಲ್ಲ. ಇದು ಹೊಸ ಸ್ಟೈಲ್‌ನ ಹಾಡು. ಇದನ್ನು ಮಾಡಬೇಕು ಎಂದು ತುಂಬಾ ಹಿಂದಿನಿಂದಲೇ ಯೋಜನೆ ಹಾಕಿದ್ದೆ. ನನ್ನ ವೈಯಕ್ತಿಕ ಜೀವನದಲ್ಲಿ ನಡೆದ ಕೆಲವು ಘಟನೆಗಳ ಮೊದಲೇ ಈ ಹಾಡು ತಯಾರಾಗಿತ್ತು.
ನೆಗೆಟಿವ್ ಪ್ರಚಾರ ಬೇಡ
ಆದರೆ ಸೋಶಿಯಲ್ ಮೀಡಿಯಾಗಳಲ್ಲಿ ಈ ಹಾಡು ನನ್ನ ವೈಯಕ್ತಿಕ ಜೀವನದ ನೋವು ಎನ್ನುವಂತೆ ತೋರಿಸಲಾಗುತ್ತಿದೆ. ಸಾಕಷ್ಟು ಪ್ರಶ್ನೆಗಳು ಬರುತ್ತಿವೆ. ಹೀಗಾಗಿ ಸ್ಪಷ್ಟನೆ ನೀಡುವ ಪರಿಸ್ಥಿತಿ ಬಂದಿದೆ. ನನ್ನ ಜೀವನಕ್ಕೂ ಈ ಹಾಡಿಗೂ ಸಂಬಂಧ ಇಲ್ಲ. ಹಾಡು ಇಷ್ಟವಾದರೆ ಪ್ರೋತ್ಸಾಹಿಸಿ. ನೆಗೆಟಿವ್ ಪ್ರಚಾರ ಬೇಡ. ಸಂಗೀತ ಎನ್ನುವುದು ಸೃಜನಶೀಲತೆಯ ಅಭಿವ್ಯಕ್ತಿ. ಪ್ರತಿಯೊಂದು ಹಾಡೂ ಕಲಾವಿದನ ವೈಯಕ್ತಿಕ ಜೀವನದ ಕಥೆಯಾಗಿರಬೇಕಿಲ್ಲ. ಈ ಹಾಡಿಗೆ ನೀವು ತೋರಿಸುತ್ತಿರುವ ಪ್ರೀತಿ ಹಾಗೂ ಬೆಂಬಲಕ್ಕೆ ಧನ್ಯವಾದಗಳು. ನಿಮ್ಮ ಪ್ರೀತಿಯೇ ನನಗೆ ಇನ್ನಷ್ಟು ಹೊಸ ಪ್ರಯೋಗಗಳನ್ನು ಮಾಡಲು ಸ್ಪೂರ್ಥಿ ನೀಡುತ್ತವೆ ಎಂದಿದ್ದಾರೆ.
ಕಮೆಂಟ್ಸ್ ಹೇಗಿದೆ?
ನೀವೇನಾದ್ರೂ ಹೇಳಿ ಬಾಸ್ ಈ ಹಾಡು ಅವಳಿಗೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ ಎಂದು ಒಬ್ಬರ ಕಮೆಂಟ್ ಮಾಡಿದ್ದರೆ, ಮತ್ತೊಬ್ಬರು ಈ ಹಾಡನ್ನು ರಿಲೀಸ್ ಮಾಡಿದರೆ ಎಲ್ಲರೂ ಅದು ನಿವೇದಿತಾ ಎಂದುಕೊಳ್ಳುವುದರಲ್ಲಿ ತಪ್ಪಿಲ್ಲ. ಹಾಗೆ ಅಂದುಕೊಳ್ತಾರೆ ಎಂದು ಗೊತ್ತಿದ್ದರೂ ನೀವು ಹಾಡನ್ನು ರಿಲೀಸ್ ಮಾಡಿದ್ದೀರಿ. ಜೀವನದ ಕೆಲ ಇನ್ಸಿಡೆಂಟ್‌ಗಳನ್ನು ಇಲ್ಲಿ ಸೇರಿಸಿದ್ದೀರಿ. ಇಬ್ಬರಿಗೂ ಡಿವೋರ್ಸ್ ಆಗಿದೆ. ಮೂವ್ ಆನ್ ಆಗಬೇಕು. ಇಂಟೆಷನಲ್ ಅಲ್ಲದಿದ್ರೂ ಆ ಹುಡುಗಿಗೆ ನೋವಾಗಿದೆ ಎಂದು ಹೇಳಿದ್ದಾರೆ.



