ಫಿಫಾ ವೀಕ್ಷಿಸಲು ಬಂದವರಲ್ಲಿ 500ಕ್ಕೂ ಹೆಚ್ಚು ಜನ ಇಸ್ಲಾಂಗೆ ಮತಾಂತರ ಗೊಂಡಿದ್ದಾರೆಂದ ಮಜೀದ್ ಫ್ರೀಮನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕತಾರ್‌ ನಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್‌ ಹಲವು ವಿವಾದಗಳನ್ನು ಸೃಷ್ಟಿಸಿದೆ. ಅವುಗಳಲ್ಲಿ ಭಾರತದಲ್ಲಿ ನಿಷೇಧಿಸಲ್ಪಟ್ಟಿರುವ ಝಾಕೀರ್‌ ನಾಯಕ್‌ ಎಂಬಾತನನ್ನು ಸಾರ್ವಜನಿಕ ಭಾಷಣ ನೀಡಲೆಂದೇ ಆಹ್ವಾನ ವಿತ್ತಿರುವ ಸುದ್ದಿಗಳನ್ನು ನೀವು ಓದಿರುತ್ತೀರಿ. ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದ ಇನ್ನೊಂದು ಆತಂಕಕಾರಿ ಬೆಳವಣಿಗೆ ಹೊರಬಿದ್ದಿದೆ. ಫೀಫಾ ವೀಕ್ಷಣೆಗೆಂದೇ ವಿದೇಶಗಳಿಂದ ಕತಾರ್‌ ಗೆ ಆಗಮಿಸಿರುವ ಪ್ರವಾಸಿಗರು ಮತಾಂತರಗೊಂಡಿದ್ದಾರೆಂಬ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

ಈ ಕುರಿತು ಮಜೀದ್‌ ಫ್ರೀಮನ್‌ ಎಂಬಾತ ಟ್ವೀಟ್‌ ಮಾಡಿದ್ದು “ಫಿಫಾ ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಜನರು ಈಗಾಗಲೇ ಇಸ್ಲಾಂ ಸ್ವೀಕಾರ ಮಾಡಿದ್ದಾರೆ. ಈಕಾರ್ಯಕ್ರಮದಲ್ಲಿ ಜಗತ್ತಿನ ಹಲವಾರು ಕಡೆಗಳಿಂದ ಬಂದ ಇನ್ನೂ ಅನೇಕರಿದ್ದಾರೆ. ಅವರೆಲ್ಲರೂ ಇಸ್ಲಾಂ ಶ್ರೇಷ್ಟತೆಯ ಬಗ್ಗೆ ತಿಳಿದುಕೊಳ್ಳಲಿದ್ದಾರೆ” ಎಂದು ಬರೆದುಕೊಂಡಿದ್ದಾನೆ.
ಈ ಮಜೀದ್‌ ಫ್ರೀಮನ್‌ ಯಾರೆಂದರೆ ಇಂಗ್ಲೆಂಡಿನ ಲಿಸೆಸ್ಟರ್‌ ಹಿಂಸಾಚರಕ್ಕೆ ಪ್ರಚೋದನೆ ನೀಡಿದವನು. ಹಿಂದೂ ಹೇಡಿಗಳು ಪಾಕಿಸ್ತಾನ ವಿರೋಧಿ ಘೋಷಣೆ ಕೂಗಿ ಹಲ್ಲೆಗೆ ಯತ್ನಿಸಿದರು. ಇಂಥಹವರಿಗೆ ಶಿಕ್ಷೆಯಾಗಬೇಕು ಎಂದಿದ್ದವನು. ಈಗ ಫಿಫಾ ಮತಾಂತರದ ಕುರಿತು ಈತ ಮಾಡಿರುವ ಟ್ವೀಟ್‌ ವೈರಲ್‌ ಆಗಿದೆ.

ಸಾರ್ವಜನಿಕ ಭಾಷಣಗಳ ಮೂಲಕ ಮತಾಂತರಕ್ಕೆ ಪ್ರಚೋದನೆ ನೀಡುವುದಕ್ಕೇ ಝಾಕೀರ್‌ ನಾಯ್ಕ ಎಂಬಾತ ಕುಖ್ಯಾತಿ ಗಳಿಸಿದ್ದಾನೆ. ಆತನನ್ನು ಫಿಫಾ ಕಾರ್ಯಕ್ರಮದ ಸಂದರ್ಭದಲ್ಲಿ ಸಾರ್ವಜನಿಕ ಭಾಷಣಗಳಿಗೆ ಆಹ್ವಾನಿಸುವುದು. ಹಾಗೂ ಪ್ರಸ್ತುತ ಈತ ಹಂಚಿಕೊಂಡಿರುವ ಬೆಳವಣಿಗೆಗಳನ್ನು ಗಮನಿಸಿದಾಗ ಫಿಫಾ ಇಸ್ಲಾಂ ದುಷ್ಟ ಶಕ್ತಿಗಳಿಗೆ ಮತಾಂತರದ ವೇದಿಕೆಯಾಗಿ ಬಳಕೆಯಾಗುತ್ತಿದೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ.

ನೂಪುರ್‌ ಶರ್ಮಾ ವಿಷಯದಲ್ಲಿ ಕತಾರ್‌ ಭಾರತವನ್ನು ಖಂಡಿಸಿತ್ತು. ಈಗ ಭಾರತವೂ ಕೂಡ ಜಾಕೀರ್‌ ನಾಯ್ಕ್‌ ವಿಷಯದಲ್ಲಿ ಅದೇ ನಿರ್ಧಾರ ಕೈಗೊಳ್ಳಬೇಕಿದೆ ಎಂಬ ಮಾತುಗಳೀಗ ಎಲ್ಲೆಡೆ ಎದ್ದಿವೆ. ಫಿಫಾ ವನ್ನು ನಿಷೇಧಿಸುವಂತೆ ಭಾರತದ ಹಲವೆಡೆ ಕೂಗುಗಳೂ ಕೇಳಿ ಬರುತ್ತಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!